ರಾಜ್ ಕೋಟ್: ಗುಜರಾತ್ ನಲ್ಲಿ ರಾಜ್ ಕೋಟ್ ನಾಗರಿಕ ಪ್ರಾಧಿಕಾರವು ಒಂದು ತಿಂಗಳ ಕಾಲ ಮಾಂಸಾಹಾರ ಮಾರಾಟವನ್ನು ನಿಷೇಧಿಸಿದೆ.
ರಾಜ್ ಕೋಟ್ ಮುನ್ಸಿಪಲ್ ಕೋಆಪರೇಶನ್ (ಆರ್ ಎಸಿ) ಜುಲೈ 29 ರಿಂದ ನಾಲ್ಕು ಸೋಮವಾರಗಳಲ್ಲಿ ಅಂದರೆ ಆಗಸ್ಟ್ 1, 8, 15 ಮತ್ತು 22 ರಂದು ಮತ್ತು ಆಗಸ್ಟ್ 19 ರಂದು ಜನ್ಮಾಷ್ಟಮಿಯ ಸಂದರ್ಭದಲ್ಲಿ ಮಾಂಸ, ಮಟನ್, ಮೊಟ್ಟೆ, ಮೀನು ಮತ್ತು ಇತರ ಮಾಂಸಾಹಾರಿ ಆಹಾರಗಳನ್ನು ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಮಾರಾಟ ಮಾಡದಂತೆ ನಿಷೇಧ ಹೇರಿದೆ.
ಹಿಂದೂ ಸಂಸ್ಕೃತಿಯ ಪ್ರಕಾರ ಶ್ರಾವಣ ತಿಂಗಳು ಜುಲೈ 29 ರಂದು ಅಮವಾಸ್ಯೆಯಂದು ಪ್ರಾರಂಭವಾಗುತ್ತದೆ, ಆದರೆ ಉತ್ತರ ಭಾರತದಲ್ಲಿ ಶ್ರಾವಣ ತಿಂಗಳು ಈಗಾಗಲೇ 15 ದಿನಗಳ ಹಿಂದೆ ಪ್ರಾರಂಭವಾಗಿದೆ.