ಐದು ರೂ. ನಾಣ್ಯ ನುಂಗಿ ಮಗು ಮೃತ್ಯು!

Prasthutha|

ಮೈಸೂರು: ಆಟವಾಡುವಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ.


ಅಜ್ಜಿಯ ಮನೆಗೆ ಬಂದಿದ್ದ ಖುಷಿ ಎಂಬ ಮಗು ಸಾವನ್ನಪ್ಪಿದ್ದು. ನಾಲ್ಕು ವರ್ಷದ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ನುಂಗಿದ್ದಳು. ತಕ್ಷಣವೇ ಪೋಷಕರು ಮಗುವಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಗು ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಪೋಷಕರ ರೋದನ ಮುಗಿಲುಮುಟ್ಟಿತ್ತು.

- Advertisement -