ಮೀರತ್: ಗುಂಪುಹತ್ಯೆ ಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಮಿರ್ಝಾಪುರದಿಂದ ವರದಿಯಾಗಿದೆ. ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಒಬ್ಬರ ಕೊಲೆಯಾಗಿತ್ತು. ಪ್ರಸಕ್ತ ಕೊಲೆ ಆರೋಪಿಯನ್ನು ಆಕ್ರೋಶಿತ ಗುಂಪೊಂದು ಭೀಕರವಾಗಿ ಕೊಲೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಿರ್ಝಾಪುರದಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ಆಕ್ರೋಶಿತ ಗುಂಪೊಂದು ಮರದ ದೊಣ್ಣೆ, ದಿಮ್ಮಿ, ಇಟ್ಟಿಗೆ ಸೇರಿದಂತೆ ಮಾರಕಾಯುಧದಿಂದ ಹೊಡೆದು ಕೊಲ್ಲುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯುಪಿ ಪೊಲೀಸರ ಸಮ್ಮುಖದಲ್ಲೇ ನಡೆದಿರುವ ಈ ಘಟನೆಯಲ್ಲಿ ಆಕ್ರೋಶಿತ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ನಂತರ ಭೀಕರವಾಗಿ ಕೊಲೆ ನಡೆಸಿರುವುದು ವೈರಲ್ ವೀಡಿಯೋದಿಂದ ಬಹಿರಂಗವಾಗಿದೆ.
ಪ್ರಸಕ್ತ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ತೀರಾ ಹದೆಗೆಟ್ಟಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರ ಇದನ್ನು ನಿಭಾಯಿಸುವಲ್ಲಿ ದಯನೀಯ ವೈಫಲ್ಯ ಕಂಡಿದೆ.