ಪಡಿತರ ಚೀಟಿ ಹೊಂದಿರುವವ ವೃದ್ಧರಿಗೆ ಭರ್ಜರಿ ನ್ಯೂಸ್

Prasthutha|

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ.

- Advertisement -

ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಬದಲಿಗೆ ಮನೆ ಬಾಗಿಲಲ್ಲೇ ಪಡಿತರ ನೀಡಲು ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಆಹಾರ ಇಲಾಖೆ ಜಾರಿಗೊಳಿಸಲು ನಿರ್ಧರಿಸಿದೆ.

75 ವರ್ಷ ದಾಟಿದವರ ಮನೆ ಬಾಗಿಲಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ತಲುಪಿಸಲು ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯ ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿದ ಬಳಿಕ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಸೇರಿ ಪಡಿತರ ಪಡೆಯಬೇಕಾಗುತ್ತದೆ. ಇದರಿಂದ ಹಿರಿಯರಿಗೆ ಪಡಿತರ ಪಡೆಯಲು ಕಷ್ಟವಾಗುತ್ತಿದೆ. ತುಂಬು ವೃದ್ಧರು ನ್ಯಾಯಬೆಲೆ ಅಂಗಡಿಗೆ ಹೋಗುವ ಬದಲಿಗೆ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಲಾಗಿದೆ.

- Advertisement -

ಪಡಿತರ ಚೀಟಿಯಲ್ಲಿ ನಮೂದಿಸಿದಂತೆ 75 ವರ್ಷ ಒಳಗಿನ ಬೇರೆ ಸದಸ್ಯರು ಇಲ್ಲದ, ಅದೇ ರೀತಿ 75 ವರ್ಷ ದಾಟಿದ ವೃದ್ಧರು, ದಂಪತಿಗೆ ಮನೆ ಬಾಗಿಲಿಗೆ ಪಡಿತರ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪಡಿತರ ಚೀಟಿಯಲ್ಲಿ 75 ವರ್ಷದೊಳಗಿನ ಸದಸ್ಯರ ಹೆಸರು ಇದ್ದರೂ ಅವರು ಕೆಲಸ ಕಾರ್ಯಗಳ ನಿಮಿತ್ತ ವಲಸೆ ಹೋಗಿದ್ದರೆ ಆ ಕುಟುಂಬಗಳ ವೃದ್ಧರು ಮನವಿ ಸಲ್ಲಿಸಿದರೆ ಅವರ ಮನೆ ಬಾಗಿಲಿಗೂ ಕೂಡ ಪಡಿತರ ತಲುಪಿಸಲಾಗುತ್ತದೆ ಎಂದು ತಿಳಿದುಬಂದಿದೆ.



Join Whatsapp