ಮಂಗಳೂರು ಪೋಲಿಸರ ತಾರತಮ್ಯ ಧೋರಣೆ ಅಧಿಕಾರಿ ವರ್ಗದ ಕೋಮುವಾದಕ್ಕೆ ಕೈಗನ್ನಡಿ: ರಿಯಾಝ್ ಫರಂಗಿಪೇಟೆ

Prasthutha|

ಮಂಗಳೂರು: ಮಂಗಳೂರಿನ ಪೊಲೀಸರಲ್ಲೂ ಸಂಘೀ ಮನೋಸ್ಥಿತಿಯ ಕೋಮುವಾದವು ಮನೆಮಾಡಿದೆ ಎಂಬುದನ್ನು ಜಗಜ್ಜಾಹಿರುಗೊಳಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ರವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ಧಾರೆ.

- Advertisement -

ಒಂದು ಪ್ರಕರಣದಲ್ಲಿ ಮಂಗಳೂರಿನ ವಕೀಲೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಶೆಲ್ ಬಸ್ಸಿನ ನಿರ್ವಾಹಕನ ಮೇಲೆ IPC section 354 ದಾಖಲಾಗಿರುವ ಹೊರತಾಗಿಯೂ ಕದ್ರಿ ಪೊಲೀಸರು ಕೇವಲ ನೋಟಿಸ್ ನೀಡಿ ಕೈ ತೊಳೆದು ಕೊಂಡಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ವೆನ್ಲಾಕ್ ಆಸ್ಪತ್ರೆಯ ಸೆಕ್ಯುರಿಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಸಮಾಜ ಸೇವಕ ಆಸಿಫ್ ಆಪತ್ಬಾಂಧವರ ಮೇಲೆ IPC section 354 ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ. ಒಂದೇ ರೀತಿಯ ಸೆಕ್ಷನ್ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಆರೋಪಿಗಳ ಧರ್ಮ ನೋಡಿ ಮಂಗಳೂರು ಪೊಲೀಸರು ನಡೆಸಿಕೊಂಡಿರುವ ರೀತಿ ತಾರತಮ್ಯ ಧೋರಣೆ ಆಗಿರುತ್ತದೆ ಮಾತ್ರವಲ್ಲ, ಇದು ಮಂಗಳೂರಿನ ಪೊಲೀಸರಲ್ಲೂ ಸಂಘೀ ಮನೋಸ್ಥಿತಿಯ ಕೋಮುವಾದವು ಮನೆಮಾಡಿದೆ ಎಂಬುದನ್ನು ಜಗಜ್ಜಾಹಿರುಗೊಳಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ರಿಯಾಝ್ ಫರಂಗಿಪೇಟೆ ರವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿರುತ್ತಾರೆ.ಅಸಮಾಧಾನ ವ್ಯಕ್ತಪಡಿಸದ್ಧಾರೆ.

- Advertisement -
          
Join Whatsapp