ಗ್ರಾ.ಪಂ. ಚುನಾವಣಾ ಫಲಿತಾಂಶ | ಬಿಜೆಪಿಗರಿಗೆ ಆರಂಭಿಕ ಮುನ್ನಡೆ; ಕಾಂಗ್ರೆಸ್, SDPI ಗೆದ್ದಿದೆಷ್ಟು?…. ಇಲ್ಲಿದೆ ವಿವರ

Prasthutha|

ಮಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಡಿ.22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆಯಿಂದಲೇ ಎಲ್ಲಾ ಮತ ಎಣಿಕೆ ಕೇಂದ್ರದಲ್ಲಿ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

- Advertisement -

ಸದ್ಯಕ್ಕೆ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ ಗಳ ಫಲಿತಾಂಶ ವಿವರ ಲಭ್ಯವಾಗಿದ್ದು, ಆರಂಭಿಕವಾಗಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಕೆಲವು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಅಭ್ಯರ್ಥಿಗಳೂ ವಿಜೇತರಾಗಿದ್ದಾರೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಈ ಕೆಳಗಿನ ಗ್ರಾಮ ಪಂಚಾಯತ್ ಗಳಲ್ಲಿ ವಿಜೇತರಾದವರ ವಿವರ :

- Advertisement -

➤ ಹಂದಾಡಿ ಗ್ರಾಮಪಂಚಾಯತ್ ನ ಬೆಣ್ಣೆಕುದ್ರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ 144 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಶಿವಪೂಜಾರಿ ಅವರನ್ನು 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪ್ರಸಾದ್ 37 ಮತ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಿವಪೂಜಾರಿ 110 ಮತ ಪಡೆದಿದ್ದಾರೆ.

➤ ಪಡಂಗಡಿ ಗ್ರಾಮದ ಗಾಯತ್ರಿ ಹಾಗೂ ರಿಚರ್ಡ್ ಗೋವಿಯಸ್ ಗೆಲುವು ಸಾಧಿಸಿದ್ದಾರೆ.

➤ ಬ್ರಹ್ಮಾವರದ ಯಡ್ತಾಡಿ 2ನೇ ವಾರ್ಡ್ ನಲ್ಲಿ ಪಕ್ಷೇತರ ಲೋಕೇಶ್ ನಾಯಕ್ ಪ್ರತಿಸ್ಪರ್ಧಿ ರಾಮನಾಯಕ್ ಅವರನ್ನು 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

➤ ನೆಲ್ಯಾಡಿ ಗ್ರಾಮದ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಇಕ್ಬಾಲ್ 283 ಮತಗಳು ಮತ್ತು ರೇಷ್ಮಾ 365 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

➤ ಯಡ್ತಾಡಿ 1 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಅಮೃತ ಪೂಜಾರಿ 321 ಮತಗಳನ್ನು ಪಡೆಯುವ ಮೂಲಕ, ಪ್ರತಿಸ್ಪರ್ಧಿ ರತ್ನಾಕರ್ ಪೂಜಾರಿ ಅವರ ವಿರುದ್ಧ 90 ಮತದಿಂದ ಗೆಲುವು ಸಾಧಿಸಿದ್ದಾರೆ.

➤ ಕುರ್ಕಾಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್, ಮಲ್ಲಿಕಾ ಗೆಲುವು ಸಾಧಿಸಿದ್ದಾರೆ.

➤ ಉಡುಪಿಯ ಮಣಿಪುರ – 2 ವಾರ್ಡ್ ನಲ್ಲಿ ಪ್ರಭಾತ್ ಕುಮಾರ್ ಗೆ 290 ಮತ ಅಂತರದಲ್ಲಿ ಗೆಲುವು.

➤ ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ ಮತ್ತು ಬಿಜೆಪಿ ಬೆಂಬಲಿತ ವಿನೋದ್ ಬೊಳ್ಮಲೆ ಗೆಲುವು ಸಾಧಿಸಿದ್ದಾರೆ.

➤ ಕಾರ್ಕಳ ತಾಲೂಕಿನಲ್ಲಿ ವಿವಿಧ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ವಿಜೇತರಾಗಿದ್ದಾರೆ. ದುರ್ಗಾ ಗ್ರಾ.ಪಂ.ನಲ್ಲಿ ರಾಜೇಶ್ ಗೋರೆ,  ಬೆಳ್ಮಣ್ ಗ್ರಾ.ಪಂ ನ ಸುರೇಶ್ ಪೂಜಾರಿ, ಬೋಳ ಗ್ರಾ.ಪಂ ನಲ್ಲಿ ಕಿರಣ್ ಶೆಟ್ಟಿ ವಿಜೇತರಾಗಿದ್ದಾರೆ.

➤ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತರಾದ ಶ್ರೀರಾಮ ಪಕ್ಕಳ ಮತ್ತು ವತ್ಸಲಾ ಗೆಲುವು ಸಾಧಿಸಿದ್ದಾರೆ.

➤ ಕಾಪು ತಾಲೂಕು ಬೆಳಪು 3ನೇ ವಾರ್ಡ್ ನಲ್ಲಿ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು.

➤ ಮೂಲ್ಕಿ ಹೋಬಳಿಯ ಬಳ್ಕುಂಜೆ ಗ್ರಾಮ ಪಂಚಾಯತಿಯ ಕರ್ನಿರೆ 1 ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜ ಕೋಟ್ಯಾನ್ (251) ವಿಜೇತರಾಗಿದ್ದಾರೆ.

➤ ಹೆಜಮಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತೆ ಫರೀದಾ (351) ಅವರು ಆಶಾ (199) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

➤ 80 ಬಡಗಬೆಟ್ಟು ವಾರ್ಡ್ ನಲ್ಲಿ ಗಣಪತಿ ನಾಯಕ್, ಲಕ್ಷ್ಮೀ ಶೆಟ್ಟಿ ವಿಜಯ ಸಾಧಿಸಿದ್ದಾರೆ.

➤ ಬ್ರಹ್ಮಾವರದ 20 ಆರೂರು 4ನೇ ವಾರ್ಡ್ ಗಣೇಶ್ ತಮ್ಮ ಪ್ರತಿಸ್ಪರ್ಧಿ ವಿರುದ್ದ 247 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.

ಮಂಗಳೂರಿನ ತಲಪಾಡಿ 3ನೇ ವಾರ್ಡ್ ನಲ್ಲಿ ಎಸ್ ಡಿಪಿಐ ಬೆಂಬಲಿತರಾದ ಇಸ್ಮಾಯಿಲ್ ಶಾಫಿ (430 ಮತ), ಸುಮಾಯ್ಯ (450 ಮತ) ಗಳಿಂದ ಜಯ ಸಾಧಿಸಿದ್ದಾರೆ.

➤ ಮಜೂರು ಗ್ರಾ.ಪಂ‌. ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲಿಯಾನ್ ಮತ್ತು ವನಿತಾ ಗೆಲುವು

➤ ಎಲ್ಲೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ರವಿರಾಜ್ ರಾವ್ (377) ಮತ್ತು ಉಷಾ ಪೂಜಾರಿ (264) ಅವರಿಗೆ ಗೆಲುವು.

➤ ಕುರ್ಕಾಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ಪ್ರವೀಣ್ ಕುರ್ಕಾಲು ಮತ್ತು ಮಲ್ಲಿಕಾ ವಿಜಯ ಸಾಧಿಸಿದ್ದಾರೆ.

➤ ಪಡುಬಿದ್ರಿ ಗ್ರಾ.ಪಂ. ಪಾದೆಬೆಟ್ಟು ವಾರ್ಡ್ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿಗೆ ಗೆಲುವಾಗಿದೆ.

➤ ಅರಂತೋಡು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟರಮಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಇನ್ನೋರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಕೂಡ ಗೆದ್ದಿದ್ದಾರೆ.



Join Whatsapp