ಕಾಶ್ಮೀರದಲ್ಲಿ ಭೂಕಂಪ| ಜೀವ ರಕ್ಷಣೆಗೆ ಒಮರ್ ಅಬ್ದುಲ್ಲಾಹ್ ಮಾಡಿದ್ದೇನು?

Prasthutha|

- Advertisement -

ಶುಕ್ರವಾರ ರಾತ್ರಿ ಉತ್ತರ ಭಾರತದಲ್ಲಿ ಸಂಭವಿಸಿದ ಭೀಕರ ಭೂಕಂಪದ ಕುರಿತು ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. 2005 ರ ಭೂಕಂಪದ ನಂತರ ಮೊದಲ ಬಾರಿಗೆ ಇಂತಹಾ ನಡುಗಿಸುವ ಭೀಕರ ಅನುಭವ ಉಂಟಾಗಿದೆ ಎಂದು ಒಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿದ್ದಾರೆ. ಭೂಕಂಪನ ಸಂಭವಿಸಿದಾಗ ಕಂಬಳಿ ಹೊದ್ದು ಮನೆಯಿಂದ ಹೊರಗೆ ಓಡಿಹೋದೆ ಎಂದು ಅವರು ಹೇಳಿದ್ದಾರೆ.

ಭೂಕಂಪ ಶ್ರೀನಗರವನ್ನು ಕೂಡ ನಡುಗಿಸಿತ್ತು. 2005 ರ ಭೂಕಂಪದ ನಂತರ ಈ ಭೂಕಂಪನವು ನನ್ನನ್ನು ಮನೆಯಿಂದ ಹೊರಗೆ ಓಡಿಸುವಷ್ಟು ಪ್ರಬಲವಾಗಿತ್ತು. ನಾನು ಕಂಬಳಿ ಹೊದ್ದುಕೊಂಡು ಓಡಿ ಹೋದೆ.ನಾನು ಫೋನ್ ತೆಗೆದುಕೊಳ್ಳಲು ಮರೆತಿದ್ದೆ. ಅದಕ್ಕಾಗಿಯೇ ಭೂಮಿ ಅಲುಗಾಡಿದಾಗ ನನಗೆ ‘ಭೂಕಂಪ’ ಎಂದು ಟ್ವೀಟ್ ಮಾಡಲು ಸಾಧ್ಯವಾಗಲಿಲ್ಲ “ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಭೂಕಂಪವು ರಿಕ್ಟರ್ ಮಾಪಕದ ಪ್ರಮಾಣ 6.3 ಆಗಿತ್ತು. ಭೂಕಂಪನವು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದ ಮೇಲೆ ಪರಿಣಾಮ ಬೀರಿತ್ತು. ಯಾವುದೇ ಗಮನಾರ್ಹ ಹಾನಿ ವರದಿಯಾಗಿಲ್ಲ. ಭೂಕಂಪನವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೇಲೆ ಭಾರೀ ಪರಿಣಾಮ ಬೀರಿದೆ. ಭೂಕಂಪದ ನಂತರ ಜನರು ತಮ್ಮ ಮನೆಗಳಿಂದ ಹೊರಗೆ ಬಂದಿದ್ದರು. ಪರಿಸ್ಥಿತಿ ಶಾಂತವಾದಾಗ ಮನೆಗೆ ಹಿಂತಿರುಗಿದ್ದರು.



Join Whatsapp