ಚೀನಾದಿಂದ ಆಪತ್ತು ಖಚಿತವೆಂದ ಜೋ ಬೈಡನ್

Prasthutha|

- Advertisement -

ಅಮೇರಿಕಾ ಅಧ್ಯಕ್ಷರಾದ ಬಳಿಕ ಮೊದಲನೇ ಬಾರಿ ಹಾಂಕಾಂಗ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಮಾಡಿದ ಜೋ ಬೈಡನ್ ಚೀನಾದ ಬಗ್ಗೆ ಅಮೇರಿಕಾದ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ. ನಾವು ಎಚ್ಚರಿಕೆಯಿಂದ ಇರದಿದ್ದರೆ ಚೀನಾ ಅಮೇರಿಕಾದ ಅವಕಾಶಗಳನ್ನು ಕಬಳಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಾಂಕಾಂಗಿನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರ ವಿರುದ್ಧ ನಡೆದ ಕಾನೂನು ಕ್ರಮದ ಕುರಿತು ಬೈಡನ್ ಆಕ್ಷೇಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕ್ಸಿ ಜಿನ್ ಪಿಂಗ್ ‘ಎರಡು ರಾಷ್ಟ್ರಗಳ ನಡುವಿನ ಸಮಸ್ಯೆ ದೇಶಕ್ಕೇ ಮಾರಕವಾಯ್ತು’ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಎರಡು ಉಭಯ ರಾಷ್ಟ್ರಗಳ ಅಧ್ಯಕ್ಷರ ನಡುವೆ ಎರಡುವರೆ ಗಂಟೆಗಳ ಸುದೀರ್ಘ ಕಾಲದ ಮಾತುಕತೆ ನಡೆಯಿತಾದರೂ ಪರಸ್ಪರ ದೇಶಗಳ ಮಧ್ಯೆ ಇರುವ ಭಿನ್ನಾಬಿಪ್ರಾಯದ ಕುರಿತು ಪ್ರಸ್ತಾಪವಾಗಲೇ ಇಲ್ಲ. ಆ ಬಳಿಕ ಅಮೇರಿಕಾ ಮುಂದಡಿಯಿಡದೇ ಇದ್ದರೆ ತಮ್ಮ ಅವಕಾಶಗಳನ್ನುಚೀನಾ ಕಬಳಿಸಲಿದೆ ಎಂದು ಬೈಡನ್ ಅಮೇರಿಕಾ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.  

- Advertisement -

ಡೊನಾಲ್ದ್ ಟ್ರಂಪ್ ಅವಧಿಯಲ್ಲಿ ಶುರುವಾದ ಅಮೆರಿಕಾ ಚೀನಾ ಜಗಳ ಹಾಲಿ ವರ್ಷವೂ ಮುಂದುವರಿಯಲಿದೆ ಎಂಬುವುದು ಖಚಿತವಾಗಿದೆ.

Join Whatsapp