ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು: ಡಿ.ಕೆ ಶಿವಕುಮಾರ್

Prasthutha: July 5, 2021

ಮಂಗಳೂರು: ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ರಾಜ್ಯಕ್ಕೆ ಅತೀ ಮುಖ್ಯವಾದ ಯೋಜನೆಯಾಗಿದ್ದು, ಹಿಂದೆ ನಾನು ಸಚಿವನಾಗಿದ್ದಾಗ ಕೂಡಾ ಈ ಯೋಜನೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿದ್ದೆ. ಕೇಂದ್ರ ಪರಿಸರ ಸಚಿವಾಲಯ ಇದಕ್ಕೆ ಒಪ್ಪಿಗೆ ‌ನೀಡಿತ್ತು ಎಂದಿದ್ದಾರೆ.

ಕಾಮಗಾರಿಗೆ ಯಾರ ಅನುಮತಿ ಯೂ ಬೇಕಾಗಿಲ್ಲ. ಯಾರನ್ನೂ ಕೇಳಿ ಮಸಾಲೆ ಅರೆಯಬೇಕಾಗಿಲ್ಲ. ನಮ್ಮ ಭೂಮಿ,ನಮ್ಮ ಹಣ, ನಮ್ಮ‌ನೀರು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಾಲಿನ ನೀರು ಯಾವುದೇ ಕಾರಣಕ್ಕೂ ತಮಿಳುನಾಡು ಪಾಲಾಗೋಕೆ ಬಿಡುವುದಿಲ್ಲ. ಮೇಕೆದಾಟು ನನ್ನ ಕ್ಷೇತ್ರದಲ್ಲೇ ಇರುವುದರಿಂದ ಮೂರು ವರ್ಷದೊಳಗೆ ಡ್ಯಾಂ ತಯಾರು ಮಾಡಿ ಬೆಂಗಳೂರಿಗೆ ನೀರು ತಲುಪಿಸಲಾಗುವುದು. ಡಿಪಿಆರ್ ಕೂಡಾ ಈಗಾಗಲೇ ತಯಾರಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿರುವ ಯಡಿಯೂರಪ್ಪನವರು ಕೇಂದ್ರ ಮತ್ತು ರಾಜ್ಯದಲ್ಲೇ ಒಂದೇ ಸರ್ಕಾರ ಬಂದ್ರೆ ಅಭಿವೃದ್ಧಿ ಸುಲಭ ಅಂತಾ ಹೇಳಿದ್ದರು. ಇದೀಗ ನಮ್ಮ ಪಕ್ಷದಿಂದಲೂ 14 ಜನರನ್ನು ಕರೆದಿಕೊಂಡಿದ್ದೀರಿ. ಈಗ ನೀವು ತಮಿಳುನಾಡು ಜೊತೆ ಭಿಕ್ಷೆ ಬೇಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ವೇಳೆ ಮಂಗಳೂರಿನಲ್ಲಿ ಮೀನುಗಾರರ ಸಮಸ್ಯೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು,  ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲಿಲ್ಲ. ಮೀನುಗಾರರಿಗೆ ಸರ್ಕಾರ ಪರಿಹಾರ ವನ್ನು ನೀಡಿಲ್ಲ   . ಕನಿಷ್ಠ ಪಕ್ಷ ಸಬ್ಸಿಡಿ, ಸಾಲ ನೀಡುವ ವ್ಯವಸ್ಥೆ ಯನ್ನೂ ನೀಡಬಹುದಿತ್ತು. ಮೀನುಗಾರಿಕೆ ಇಲ್ಲದಿದ್ದರೆ ಮಂಗಳೂರಿಗೆ ಬೆಲೆ ಇಲ್ಲ. ಮಂಗಳೂರಿನ ಆರ್ಥಿಕ ಚಟುವಟಿಕೆಗೆ ಮೀನುಗಾರಿಕೆ ಕಾರಣ ಎಂದು ಹೇಳಿದ್ದಾರೆ.  

ತಾನು ಪಕ್ಷದ ಕಾರ್ಯಕ್ರಮ ದ ಸಲುವಾಗಿ ಮಂಗಳೂರಿಗೆ ಬಂದಿಲ್ಲ. ಮೊಗವೀರರ ಕುಂದು ಕೊರತೆ ಗಳ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ನಾನು ಕರಾವಳಿ ಗೆ ಬಂದಿದ್ದೇನೆ. ಮಂಗಳೂರಿನ ಮೀನುಗಾರರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ