ಬೆಂಗಳೂರು : ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪೂರೈಕೆಗೆ ಗುತ್ತಿಗೆ ಸಲ್ಲಿಸಿದ್ದ ಎರಡು ಸಂಸ್ಥೆಗಳ ಪ್ರಸ್ತಾಪವನ್ನು ನಿರಾಕರಿಸಿರುವ ಕರ್ನಾಟಕ ಸರಕಾರ ಲಸಿಕೆ ಉತ್ಪಾದಕರನ್ನು ನೇರ ಸಂಪರ್ಕಿಸಲು ಯತ್ನಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಎರಡು ಸಂಸ್ಥೆಗಳ ಪ್ರಸ್ತಾಪವನ್ನು ತಿರಸ್ಕರಿಸಿ, ಹೊಸ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ವರದಿ ತಿಳಿಸಿದೆ.
ಸ್ಪುಟ್ನಿಕ್ ವಿ ಲಸಿಕೆ ಪೂರೈಕೆಗೆ ಬಿಡ್ ಸಲ್ಲಿಸಿದ್ದ ಎರಡು ಸಂಸ್ಥೆಗಳ ಪೇಪರ್ ವರ್ಕ್ ಸರಿಯಿಲ್ಲದಿದ್ದುದರಿಂದ ಅವುಗಳನ್ನು ರದ್ದುಪಡಿಸಿ, ಲಸಿಕೆ ಉತ್ಪಾದಕ ಸಂಸ್ಥೆಗಳಿಂದ ತಕ್ಷಣವೇ ಲಸಿಕೆ ಖರೀದಿಸುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ ನಾರಾಯಣ್ ತಿಳಿಸಿರುವುದಾಗಿ ವರದಿ ತಿಳಿಸಿದೆ. ಬೇಡಿಕೆ ಹೆಚ್ಚಿರುವುದರಿಂದ ಕರ್ನಾಟಕದಲ್ಲಿ ಲಸಿಕೆ ಕೊರತೆ ನೀಗಿಸಲು ಸರಕಾರ ಯತ್ನಿಸುತ್ತಿದೆ.