ಗೋಜ್ರಿ ಭಾಷೆಗೆ ಕುರ್‌ಆನ್ ಅನುವಾದಿಸಿದ ಮುಫ್ತಿ ಫಯಸ್ ಅಲ್-ವಾಹಿದ್ ಇನ್ನಿಲ್ಲ

Prasthutha|

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಮತ್ತು ಕುರ್‌ಆನ್ ಅನ್ನು ಮೊತ್ತ ಮೊದಲು ಗೋಜ್ರಿ ಭಾಷೆಗೆ ಅನುವಾದಿಸಿದ ಮುಫ್ತಿ ಫಯಸ್ ಅಲ್-ವಾಹಿದ್ ನಿಧನರಾಗಿದ್ದಾರೆ.

- Advertisement -

ಕೋವಿಡ್ ನಿಂದ ಬಳಲುತ್ತಿದ್ದ ಅವರು ಜಮ್ಮುವಿನ ಆಚಾರ್ಯ ಶ್ರೀ ಚಂದರ್ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಸ್ಪತ್ರೆಯ ಅಧೀಕ್ಷಕ ರಾಜಿಂದರ್ ರತನ್ ಪಾಲ್ ತಿಳಿಸಿದ್ದಾರೆ.

ಅವರು 1966 ರಲ್ಲಿ ರಜೌರಿ ಜಿಲ್ಲೆಯ ದೋಲ್ಸನ್ ಬಾಲಾದಲ್ಲಿ ಜನಿಸಿದರು. ಫಯಸ್ ಅಲ್- ವಾಹಿದ್ ಅವರು ಕುರ್‌ಆನ್ ತರ್ಜುಮಾ ಹೊರತುಪಡಿಸಿ ಸಿರಾಜ್-ಉಲ್-ಮುನೀರಾ ಮತ್ತು ಅಖಮ್-ಎ-ಮಾಯಾತ್ ನಂತಹ ಕೃತಿಗಳ ಲೇಖಕರಾಗಿದ್ದಾರೆ. ಶರೀಹತ್ ಕಾನೂನಿನ ಪಂಡಿತರಾದ ಅವರು ಅನೇಕ ಧಾರ್ಮಿಕ ಸಂಸ್ಥೆಗಳ ಪೋಷಕರಾಗಿದ್ದಾರೆ.

Join Whatsapp