ಪಠ್ಯಪುಸ್ತಕ ಪರಿಷ್ಕರಿಸಿ ಆದೇಶ ಹೊರಡಿಸಿದ ಸರ್ಕಾರ : ಯಾವೆಲ್ಲ ಪಾಠಗಳಿಗೆ ಕೊಕ್​​, ಹೊಸ ಸೇರ್ಪಡೆ ? ಇಲ್ಲಿದೆ ಮಾಹಿತಿ

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಕುರಿತ ನಿರ್ಧಾರಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತ ನಂತರ ಇದೀಗ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

- Advertisement -

ಯಾವೆಲ್ಲ ಪಾಠಗಳನ್ನು ಕೈಬಿಡಲಾಗಿದೆ

ಸಮಾಜ ವಿಜ್ಞಾನ ಪಠ್ಯಪುಸ್ತಕದ 9 ಪಾಠಗಳನ್ನು ಕೈ ಬಿಡಲಾಗಿದೆ. ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಗಳಿಗೆ ಕೊಕ್​ ನೀಡಲಾಗಿದೆ. ಆರ್​​ಎಸ್​ಎಸ್​ ಸ್ಥಾಪಕ ಕೇಶವ್ ಹೆಡ್ಗೇವಾರ್ ಅವರು ಬರೆದಿದ್ದ ‘ನಿಜವಾದ ಆದರ್ಶಪುರುಷ ಯಾರಾಗಬೇಕು’ ಪಠ್ಯ, ಚಕ್ರವರ್ತಿ ಸೂಲಿಬೆಲೆಯವರು ಬರೆದಿದ್ದ ‘ತಾಯಿ ಭಾರತಿಯ ಅಮರ ಪುತ್ರರು’ ಪಾಠವನ್ನು ಕೈ ಬಿಡಲಾಗಿದೆ.

- Advertisement -

ಇನ್ನು ಆರ್ ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ, ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆಟಿ ಗಟ್ಟಿ ಪಾಠ ಮತ್ತು ಪಿ ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ಕತ್ತರಿ ಹಾಕಲಾಗಿದೆ.

ಯಾವೆಲ್ಲ ಪಾಠಗಳ ಸೇರ್ಪಡೆ

ಸಾವಿತ್ರಿಬಾಯಿ ಫುಲೆ, ಜವಹರಲಾಲ್ ನೆಹರು, ಡಾ. ಬಿಆರ್​​ ಅಂಬೇಡ್ಕರ್, ಸುಕುಮಾರಸ್ವಾಮಿ, ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್ ಅವರ ಪಾಠಗಳನ್ನು ಸೇರಿಸಲಾಗಿದೆ. ವಾಲ್ಮೀಕಿ ಮಹರ್ಷಿ, ಉರೂಸ್​ಗಳಲ್ಲಿ ಭಾವೈಕ್ಯತೆ ಪಾಠಗಳನ್ನು ಸೇರಿಸಲಾಗಿದೆ.

ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲೂ ಹಲವು ಅಧ್ಯಾಯಗಳನ್ನು ಸೇರ್ಪಡೆ ಮಾಡಲಾಗಿದೆ. ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ, ಮಿರ್ಜಾ ಇಸ್ಮಾಯಿಲ್, ಸರ್​​ ಎಂ ವಿಶ್ವೇಶ್ವರಯ್ಯ, ಒಡೆಯರ್ ಕುರಿತ ಪಾಠಗಳನ್ನು ಸೇರಿಸಲಾಗಿದೆ.



Join Whatsapp