ಆ್ಯಂಟಿ ಕಮ್ಯೂನಲ್ ವಿಂಗ್ ಯೋಜನೆಗೆ ಪ್ರೊಬೆಷನರಿ IPS ಅಧಿಕಾರಿಗಳ ನೇತೃತ್ವದಲ್ಲೇ ತಂಡ ರಚಿಸುವುದು ಅತ್ಯಗತ್ಯ: ಅನ್ವರ್ ಸಾದತ್ ಬಜತ್ತೂರು

Prasthutha|

ಮಂಗಳೂರು: ಆ್ಯಂಟಿ ಕಮ್ಯೂನಲ್ ವಿಂಗ್ ಯೋಜನೆಗೆ ಪ್ರೊಬೆಷನರಿ IPS ಅಧಿಕಾರಿಗಳ ನೇತೃತ್ವದಲ್ಲೇ ತಂಡ ರಚಿಸುವುದು ಅತ್ಯಗತ್ಯ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಆ್ಯಂಟಿ ಕಮ್ಯೂನಲ್ ವಿಂಗ್ ಯೋಜನೆ ಫಲಪ್ರದವಾಗಬೇಕಾದರೆ ಪ್ರೊಬೆಷನರಿ IPS ಅಧಿಕಾರಿಗಳ ನೇತೃತ್ವದಲ್ಲೇ ತಂಡ ರಚಿಸುವುದು ಅತ್ಯಗತ್ಯ. ಇಲ್ಲಿಯೇ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನೇ ಈ ತಂಡಕ್ಕೆ ಹಾಕಿದರೆ ಪೋಲಿಸ್ ತಂಡದ ಹೆಸರು ಬದಲಾಗಬಹುದೇ ಹೊರತು ತಂಡದ ಕಾರ್ಯವೈಖರಿ ಮತ್ತು ಮನಸ್ಥಿತಿ ಬದಲಾಗಲ್ಲ ಎಂದು ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ಗೃಹ ಸಚಿವರು ಮಂಗಳೂರಿಗೆ ಬಂದಾಗ ಆ್ಯಂಟಿ ಕಮ್ಯೂನಲ್ ವಿಂಗ್ ಘೋಷಣೆ ಮಾಡಿದ್ದರು. ಅವರ ಸೂಚನೆಯಂತೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ ( ಸಿ ಎಸ್ ಬಿ) ಇನ್ಸ್ ಪೆಕ್ಟರ್ ಶರೀಫ್ ಅವರ ನೇತೃತ್ವದಲ್ಲಿ ಈ ತಂಡ ರಚಿಸಲಾಗಿದೆ.

ಸಿಎಸ್‌ಬಿ ಇನ್ಸ್ ಪೆಕ್ಟರ್ ಅವರು ಸಿಸಿಬಿ ಎಸಿಪಿ ಪಿ ಎ ಹೆಗ್ಡೆ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು, ಅವರು ನೇರವಾಗಿ ಪೊಲೀಸ್ ಕಮೀಷನರ್ ಅವರಿಗೆ ವರದಿ ಸಲ್ಲಿಸಲಿದ್ದಾರೆ.

“ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ರೀತಿಯ ಕೋಮು ಪ್ರಕರಣಗಳ ಬಗ್ಗೆ ನಿಗಾವಹಿಸಲಿದೆ. ಕೋಮು ಪ್ರಕರಣದ ಆರೋಪಿಗಳ ಮೇಲೆ ನಿಗಾ ವಹಿಸಲಿದ್ದು, ಅವರ ಕಾರ್ಯಾಚರಣೆ ಬಗ್ಗೆ ಗಮನಕೊಡಲಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ನ್ಯಾಯಾಲಯದ ವಿಚಾರಣೆ ಗಳ ಬಗ್ಗೆ ನಿಗಾವಹಿಸಲಿದ್ದು, ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ. ಕಳೆದ 10 ವರ್ಷಗಳಿಂದ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದೆ” ಎಂದು ಗುರುವಾರ ಸುದ್ದಿಗಾರರೊಂದಿಗೆ ಮಂಗಳೂರಿನಲ್ಲಿ ಸಿಟಿ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದರು.

Join Whatsapp