ಆರೆಸ್ಸೆಸ್ ಪಿತೂರಿಯಿಂದ ಝಮೀರ್ ಅಹ್ಮದ್ ನಿವಾಸದ ಮೇಲೆ ಇಡಿ ದಾಳಿ : ಬೇಳೂರು ಗೋಪಾಲಕೃಷ್ಣ

Prasthutha|

ಶಿವಮೊಗ್ಗ: ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ಆರೆಸ್ಸೆನ್ ನ ಪಿತೂರಿಯಿದೆ ಎಂದು ಬೇಳೂರು ಗೋಪಾಲಕೃಷ್ಣ ಅವರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣದ ವಿರುದ್ಧ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಅವರು ಮಾತನಾಡಿದರು.

- Advertisement -

ಇಡಿ ಅಧಿಕಾರಿಗಳಿಗೆ ತಾಕತ್ತಿದ್ದರೆ ಕಲ್ಲಡ್ಕ ಭಟ್ ಅವರ ನಿವಾಸಕ್ಕೆ ದಾಳಿ ಮಾಡಲಿ. ಆಗ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಲಿದೆ ಎಂದು ತಿಳಿಸಿದರು. ವಾಸ್ತವದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ನಾಯಕರು ಈ ಹಿಂದಿನಿಂದಲೂ ಝಮೀರ್ ಅವರನ್ನು ಗುರಿಯಾಗಿಸಿದ್ದರು. ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಆಸ್ತಿಯ ಮೂಲವನ್ನು ಬಹಿರಂಗಪಡಿಸಲಿ ಎಂದು ಗೋಪಾಲಕೃಷ್ಣ ಅವರು ಬಿಜೆಪಿಗೆ ಸವಾಲೆಸೆದರು.

ಈಶ್ವರಪ್ಪನವರ ದ್ವೇಷಪೂರಿತ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರಾದ ಈಶ್ವರಪ್ಪನವರು ಬುದ್ಧಿಭ್ರಮಣೆ ಆದವರಂತೆ ವರ್ತಿಸುವುದನ್ನು ಬಿಟ್ಟು ರಾಜಕೀಯ ಪ್ರಬುದ್ಧತೆಯನ್ನು ಪ್ರದರ್ಶಿಸಲಿಯೆಂದು ಕುಟುಕಿದರು. ಮಾತ್ರವಲ್ಲದೆ ಯಡಿಯೂರಪ್ಪ ಕುಟುಂಬದ ಏಜೆಂಟ್ ರಂತೆ ವರ್ತಿಸುವ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.



Join Whatsapp