ಗೂಗಲ್ ಗೆ 1,338 ಕೋಟಿ ರೂ. ದಂಡ ವಿಧಿಸಿದ ಸ್ಪರ್ಧಾ ಆಯೋಗ

Prasthutha|

ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಅನೇಕ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಗೂಗಲ್ ಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ)  1,337.76 ಕೋಟಿ ರೂ.ಗಳ  ದಂಡವನ್ನು ವಿಧಿಸಿದೆ. ಅಲ್ಲದೆ ಅವ್ಯವಹಾರಗಳನ್ನು ನಿಲ್ಲಿಸಲು ಮತ್ತು ಅದರಿಂದ ದೂರವಿರಲು ಗೂಗಲ್ ಗೆ ಆದೇಶಿಸಿದೆ.

- Advertisement -

ಮೂರು ವರ್ಷಗಳ ಹಿಂದೆ ವಿವರವಾದ ತನಿಖೆಗೆ ಆದೇಶಿಸಿದ ನಂತರ ಈ ಆದೇಶವನ್ನು ಹೊರಡಿಸಿದ ಆಯೋಗವು, ನಿರ್ದಿಷ್ಟ ಕಾಲಮಿತಿಯೊಳಗೆ ತನ್ನ ನಡವಳಿಕೆಯನ್ನು ಮಾರ್ಪಡಿಸುವಂತೆ ಗೂಗಲ್ ಗೆ ನಿರ್ದೇಶನ ನೀಡಿದೆ ಎಂದು ಭಾರತೀಯ ನಿಯಂತ್ರಕ ಪ್ರಕಟಣೆಯಲ್ಲಿ  ತಿಳಿಸಿದೆ.



Join Whatsapp