ಗೂಗಲ್’ಗೆ 25 ವರ್ಷದ ಸಂಭ್ರಮ

Prasthutha|

‘ಗ್ಯಾರೇಜ್ ನಿಂದ ಶುರುವಾಗಿ ಅಗಾಧವಾಗಿ ಬೆಳೆದಿದೆ’

- Advertisement -

ವಾಷಿಂಗ್ಟನ್: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ ಇಂದು 25 ವರ್ಷವನ್ನು ಪೂರೈಸಿದೆ. ಬುಧವಾರ ವಿಭಿನ್ನವಾದ ಡೂಡಲ್ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.


ಅಮೆರಿಕದ ಸ್ಟಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಮ್ ನಲ್ಲಿ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಎಂಬಿಬ್ಬರು ವಿದ್ಯಾರ್ಥಿಗಳ ಭೇಟಿಯಾಗಿತ್ತು. ಇಡೀ ವಿಶ್ವ ವ್ಯಾಪಿ ಅಂತರ್ಜಾಲ ಎಲ್ಲರಿಗೂ ತಲುಪಲು ಏನಾದರೊಂದು ಮಾರ್ಗ ಹುಡುಕಬೇಕು ಎಂದು ಅವರಿಬ್ಬರ ಮನಸಿನಲ್ಲಿ ಏಕರೀತಿಯ ಗುರಿ ಮತ್ತು ಆಲೋಚನೆಗಳು ಬಂದಿದ್ದವು. ಅದು 1996ರ ವರ್ಷ. ಬ್ಯಾಕ್ ರಬ್ ಎಂಬ ರಿಸರ್ಚ್ ಪ್ರಾಜೆಕ್ಟ್ ಶುರುವಾಯಿತು. ಇವರ ಆಲೋಚನೆಗೆ ರೂಪುಗೊಡಲು ಸಹಾಯವಾಗಿ ಸ್ಕಾಟ್ ಹಸನ್ ಎಂಬುವವರು ಇದ್ದರು. ಈ ಮೂವರು ಸೇರಿ ಮಾಡಿದ ಸಾಹಸ ಒಂದು ಉತ್ತಮ ಸರ್ಚ್ ಎಂಜಿನ್ ಸೃಷ್ಟಿಗೆ ಕಾರಣವಾಯಿತು. ಸ್ಕಾಟ್ ಹಸನ್ ಸರ್ಚ್ ಎಂಜಿನ್ ನ ಬಹುತೇಕ ಕೋಡ್ ಗಳನ್ನು ರಚಿಸಿದರು. ಈ ಸರ್ಚ್ ಎಂಜಿನ್ ಆಲೋಚನೆ ಸಾಕಾರಗೊಳ್ಳುತ್ತಿರುವಂತೆಯೇ ಸ್ಕಾಟ್ ಹಸನ್ ಬೇರೆ ಬೇರೆ ದಾರಿ ಹುಡುಕಿಕೊಂಡು ಹೋದರು. ಸೆರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಇಬ್ಬರೂ ಕೂಡ ಒಂದು ಗ್ಯಾರೇಜ್ ಅನ್ನು ಬಾಡಿಗೆಗೆ ಪಡೆದು ಗೂಗಲ್ ಎಂಬ ಕಂಪನಿ ಆರಂಭಿಸಿದರು.

- Advertisement -

ಗೂಗಲ್ ಈ ಬಗ್ಗೆ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್ ನಲ್ಲಿ ಹಂಚಿಕೊಂಡಿದೆ.



Join Whatsapp