‘ಇಸ್ಕಾನ್’ ಗೋವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದೆ: ಬಿಜೆಪಿ ಸಂಸದೆ ಮನೇಕಾ ಗಾಂಧಿ

Prasthutha|

ಆರೋಪಗಳನ್ನು ತಿರಸ್ಕರಿಸಿದ ‘ಇಸ್ಕಾನ್’ ರಾಷ್ಟ್ರೀಯ ವಕ್ತಾರ

- Advertisement -


ನವದೆಹಲಿ: ಇಸ್ಕಾನ್ ದೇಶದ ಅತಿ ದೊಡ್ಡ ಮೋಸದ ಸಂಸ್ಥೆಯಾಗಿದ್ದು, ಗೋಶಾಲೆಯಿಂದ ಗೋವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಹೇಳಿದ್ದಾರೆ.

ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮೇನಕಾ ಗಾಂಧಿ, “ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಯಾರಾದರೂ ಇದ್ದರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದೇ ಇದರ ಸಾರಾಂಶ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ. ”ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರುತ್ತಿದೆ. ಅವರು ರಸ್ತೆಗಳಲ್ಲಿ ‘ಹರೇ ರಾಮ್ ಹರೇ ಕೃಷ್ಣ’ ಎಂದು ಹಾಡುತ್ತಾರೆ. ನಂತರ ಅವರು ತಮ್ಮ ಇಡೀ ಜೀವನ ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ಬಹುಶಃ ಅವರಷ್ಟು ಜಾನುವಾರುಗಳನ್ನು ಯಾರೂ ಕಟುಕರಿಗೆ ಮಾರಾಟ ಮಾಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.

- Advertisement -


ಆರೋಪಗಳನ್ನು ತಿರಸ್ಕರಿಸಿದ ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್, ”ಈ ಧಾರ್ಮಿಕ ಸಂಸ್ಥೆಯು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಗೋವು ಮತ್ತು ಗೂಳಿ ರಕ್ಷಣೆ ಮತ್ತು ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಹೋರಿಗಳ ಸೇವೆ ಮಾಡುತ್ತದೆ ವಿನಃ ಅವರ ಆರೋಪದಂತೆ ಕಟುಕರಿಗೆ ಮಾರಾಟ ಮಾಡುವುದಿಲ್ಲ” ಎಂದು ಅವರು ಹೇಳಿದರು.

Join Whatsapp