ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಗಾತ್ರ ಮತ್ತು ಪ್ರದೇಶದ ಪ್ರಕಾರ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ವಾರ್ಷಿಕ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಪ್ರಶಸ್ತಿಯನ್ನು ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ನೀಡಿದ್ದು ಸತತ ನಾಲ್ಕನೇ ವರ್ಷವೂ ಬೆಂಗಳೂರು ವಿಮಾನ ನಿಲ್ದಾಣವು ಈ ಪ್ರಶಸ್ತಿಯನ್ನು ಪಡೆದಿದೆ.
ಇದು ವರ್ಷಕ್ಕೆ 25 – 40 ಮಿಲಿಯನ್ ಪ್ರಯಾಣಿಕರನ್ನು ಹೊಂದಿರುವ ಅತ್ಯುತ್ತಮ ವಿಮಾನ ನಿಲ್ದಾಣವಾಗಿದೆ ಎಂದು ಗುರುತಿಸಲಾಗಿದೆ. ಪ್ರಯಾಣಿಕರ ಸಮೀಕ್ಷೆಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗಿದೆ.
2018 ಮತ್ತು 2019 ರಲ್ಲಿ ಆಗಮನ ಮತ್ತು ನಿರ್ಗಮನ ಎರಡಕ್ಕೂ ಎಎಸ್‌ಕ್ಯೂ ಪ್ರಶಸ್ತಿಯನ್ನು ಪಡೆದ ವಿಶ್ವದ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣ ಮತ್ತು ಅದರ ಸೌಲಭ್ಯಗಳು ಆರೋಗ್ಯಕರ ಮತ್ತು ಪ್ರಯಾಣಿಕರಿಗೆ ಸುರಕ್ಷಿತವಾಗಿದೆ ಎಂದು ACI ನಿಂದ “ಗ್ರಾಹಕರ ಧ್ವನಿ” ಎಂಬ ಮಾನ್ಯತೆಯನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದಿದೆ.