ಸುರಂಗ ಕೊರೆದು SBI ಬ್ಯಾಂಕ್’ಗೆ ನುಗ್ಗಿ 1 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ

Prasthutha|

ಲಕ್ನೋ: ಸುಮಾರು 10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್’ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಾನ್ಪುರದಲ್ಲಿ  ನಡೆದಿದೆ.

- Advertisement -

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ದುಷ್ಕರ್ಮಿಗಳು  4 ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ. ಅದಾದ ಬಳಿಕ 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್’ನ ವಾಲ್ಟ್ಗೆ ಪ್ರವೇಶಿಸಿದ್ದಾರೆ.

ಬ್ಯಾಂಕ್’ನಲ್ಲಿದ್ದ 1.8 ಕೆಜಿಗಿಂತಲೂ ಹೆಚ್ಚು ತೂಕವಿದ್ದ 1 ಕೋಟಿ ರೂ.ಮೌಲ್ಯದ ಚಿನ್ನದ ಪೆಟ್ಟಿಗೆಯನ್ನು ದೋಚಿದ್ದಾರೆ. ಆದರೆ 32 ಲಕ್ಷ ರೂ. ನಗದು ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗದಿದ್ದರಿಂದ ಅದನ್ನು ಹಾಗೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

- Advertisement -

ಅಧಿಕಾರಿಗಳು ಬ್ಯಾಂಕ್’ಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಸುರಂಗ ತೋಡಿರುವುದರ ಬಗ್ಗೆಯೂ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಪೂರ್ಣ ನಕ್ಷೆಯ ಬಗ್ಗೆ ಅರಿವು ಇರುವವರೇ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

Join Whatsapp