ಬಿಹಾರದ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟ: 9 ಮಂದಿ ಮೃತ್ಯು, 8 ಜನರಿಗೆ ಗಾಯ

Prasthutha|

ಪಾಟ್ನ: ಬಿಹಾರ ರಾಜ್ಯದ ರಾಂಘರ್ ವಾ ಪ್ರದೇಶದ ಇಟ್ಟಿಗೆ ಭಟ್ಟಿಯೊಂದರ ಚಿಮಣಿ ಸ್ಫೋಟಗೊಂಡ ಪರಿಣಾಮ ಒಂಭತ್ತು ಮಂದಿ ಕಾರ್ಮಿಕರು ಮೃತಪಟ್ಟು, 8 ಮಂದಿ ತೀವ್ರ ಗಾಯಗೊಂಡ ಘಟನೆ ನಡೆದಿದೆ.

- Advertisement -

ಶನಿವಾರ ಬೆಳಿಗ್ಗೆ ಈ ದುರ್ಘಟನೆಯ ಸಾವುಗಳ ವಿವರ ತಿಳಿದಿದ್ದು ಗಾಯಾಳುಗಳನ್ನು ರಕ್ಸಾವುಲ್’ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

“ರಾಂಘರ್ ವಾದ ನರಿಗಿರ್’ನ ಇಟ್ಟಿಗೆ ಭಟ್ಟಿಯ ಸ್ಫೋಟದಿಂದ ಸತ್ತವರ ಸಂಖ್ಯೆಯು 9ಕ್ಕೇರಿದೆ. 8 ಮಂದಿ ಗಾಯಾಳುಗಳನ್ನು ರಕ್ಸಾವುಲ್’ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಿದ್ದಿರುವ ಇಟ್ಟಿಗೆ ಭಟ್ಟಿಯ ಮುರುಕುಲು ಗುಪ್ಪೆಯನ್ನು ಈಗ ತೆರವು ಗೊಳಿಸುತ್ತಿದ್ದು, ಇನ್ನಾರಾದರೂ ಸಿಕ್ಕಿರುವರೇ ಎಂಬುದು ಸ್ಪಷ್ಟವಿಲ್ಲ” ಎಂದು ಮೋತಿಹರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

- Advertisement -

ಶುಕ್ರವಾರ ಸಂಜೆ ಪೂರ್ವ ಚಂಪಾರಣ್ ಜಿಲ್ಲೆಯ ಇಲ್ಲಿ ಇಟ್ಟಿಗೆ ಭಟ್ಟಿಯೊಂದು ಸ್ಫೋಟಗೊಂಡು ಇಟ್ಟಿಗೆ ಭಟ್ಟಿಯ ಮಾಲೀಕನ ಸಹಿತ ಹಲವರು ಸಾವಿಗೀಡಾಗಿದರು. ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಪೊಲೀಸ್ ಸೂಪರಿನ್ ಟೆಂಡೆಂಟ್ ನೇತೃತ್ವದ ತಂಡ ಕೂಡಲೆ ಸ್ಥಳಕ್ಕೆ ಧಾವಿಸಿದೆ. ರಕ್ಷಣಾ ಕಾರ್ಯ ಮುಂದುವರಿದು, ಶನಿವಾರ ಬೆಳಿಗ್ಗೆ ದುರಂತದ ಸ್ಪಷ್ಟ ಚಿತ್ರಣ ದೊರೆತಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಸತ್ತವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರವು ಸಾವಿಗೀಡಾದವರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಧನದ ಆಶ್ವಾಸನೆ ನೀಡಿದೆ. ರಾಜ್ಯ ಸರಕಾರವು ಗಾಯಾಳುಗಳ ಎಲ್ಲ ಉತ್ತಮ ಚಿಕಿತ್ಸಾ ವೆಚ್ಚ ಭರಿಸಲು ಆದೇಶಿಸಿದೆ.

Join Whatsapp