ಕೇಂದ್ರ ಬಜೆಟ್ 2023: ಚಿನ್ನ, ಬೆಳ್ಳಿ, ಸಿಗರೇಟ್ ದುಬಾರಿ!

Prasthutha|

ನವದೆಹಲಿ 2023ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು ಮಂಡನೆ ಮಾಡುತ್ತಿದ್ದಾರೆ.

- Advertisement -


ಇಂದಿನ ಬಜೆಟ್ ನಲ್ಲಿ ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಮ್ ದರ ಏರಿಕೆ ಮಾಡಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ. ಇತ್ತ ಬಟ್ಟೆ ಹಾಗೂ ಸಿಗರೇಟ್ ಮೇಲಿನ ತೆರಿಗೆಯನ್ನು ಏರಿಕೆ ಮಾಡುವ ಮೂಲಕ ಧೂಮಪಾನ ಮಾಡುವವರಿಗೂ ಕೂಡ ಶಾಕ್ ನೀಡಿದ್ದಾರೆ.


ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದುಗೊಳಿಸಿದ್ದಾರೆ. ಜೊತೆಗೆ ಟಿವಿ ಬೆಲೆ ಇಳಿಕೆ ಮಾಡಿದ್ದಾರೆ. ಅಲ್ಲದೇ ಬ್ಯಾಟರಿ ಮೇಲಿನ ಕಸ್ಟಮ್ಸ್ ಡ್ಯೂಟಿ ಶೇ.13ಕ್ಕೆ ಇಳಿಕೆ ಮಾಡಿದ್ದಾರೆ. 2070ರ ವೇಳೆಗೆ ಹೊಗೆ ಮುಕ್ತ ಭಾರತ ನಿರ್ಮಾಣ ಗುರಿ ಹೊಂದುವ ನಿರೀಕ್ಷೆ ಇದೆ ಎಂದು ನಿರ್ಮಲಾ ಸೀತರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

Join Whatsapp