ಬಜೆಟ್ ಘೋಷಣೆ ಕೇವಲ ಕಾಗದಕ್ಕೆ ಮಾತ್ರ ಸೀಮಿತ: ಎಚ್.ಡಿ.ಕುಮಾರಸ್ವಾಮಿ

Prasthutha|

ದಾವಣಗೆರೆ: ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಪ್ರಾರಂಭವಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ಎಂದು ವ್ಯಂಗ್ಯವಾಡಿದರು.


ಭದ್ರಾ, ಮಹಾದಾಯಿ, ಕೃಷ್ಣ ಏನೇ ಘೋಷಣೆ ಮಾಡಿದರೂ ಮೊದಲೇ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ. ಕೇಂದ್ರದ ಹಣ ಬಿಡುಗಡೆ ಆಗುವುದರ ಒಳಗೆ ಚುನಾವಣಾ ನೀತಿ ಸಂಹಿತೆ ಬರುತ್ತೆ. ಜನರನ್ನು ತಾತ್ಕಾಲಿಕವಾಗಿ ಮೆಚ್ಚಿಸಲು ಘೋಷಣೆ ಇಡಬಹುದು ಎಂದು ತಿಳಿಸಿದರು.
ಮನೆ ಬಿದ್ದಾಗ 5 ಲಕ್ಷ, ಕೋವಿಡ್ ನಲ್ಲಿ ಸಾವನ್ನಪ್ಪಿದಾಗ 1 ಲಕ್ಷ, ಕೋವಿಡ್ ವಾರಿಯರ್ಸ್ ಗೆ 30 ಲಕ್ಷ ಕೊಡುತ್ತಾರೆ ಅಂದಿದ್ರು, ಎಲ್ಲಿ ಕೊಟ್ಟರು. ಕೇಂದ್ರ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಇರುತ್ತದೆ ಎಂದರು.

Join Whatsapp