ಚಿನ್ನದಂಗಡಿಗೆ ಕನ್ನ: 25 ಕೋಟಿ ರೂ. ಮೌಲ್ಯದ ಆಭರಣ ದರೋಡೆ

Prasthutha|

ನವದೆಹಲಿ: ಚಿನ್ನದಂಗಡಿ ಒಂದರ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ದೆಹಲಿಯ ಭೋಗಲ್ ನಲ್ಲಿ ನಡೆದಿದೆ.

- Advertisement -

ಸಂಜೀವ್ ಜೈನ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನವಾಗಿದೆ. ಅವರು ಎರಡು ದಿನಗಳಿಂದ ಅಂಗಡಿ ಮುಚ್ಚಿದ್ದರು. ಇಂದು (ಮಂಗಳವಾರ) ಅಂಗಡಿ ತೆರೆದಾಗ ಇಡೀ ಅಂಗಡಿಯಲ್ಲಿ ಧೂಳು ತುಂಬಿತ್ತು. ಅಲ್ಲದೇ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿತ್ತು. ಬಳಿಕ ಅಂಡಿಯನ್ನು ಪರೀಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಸಂಜೀವ್ ತಿಳಿಸಿದ್ದಾರೆ.