ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ, ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Prasthutha|

ಚಿಕ್ಕಬಳ್ಳಾಪುರ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಧಾನಿ ಮೋದಿ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

- Advertisement -


ಕಾವೇರಿ ವಿವಾದ ಸಮಸ್ಯೆ ಬಗೆಹರಿಸಲು ಪ್ರಧಾನಿ ಭೇಟಿಗೆ ಬಿಜೆಪಿ ನಾಯಕರು ಅವಕಾಶ ಕೇಳಲಿ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಸಭೆ ನಡೆಸಿ ಅಪಾಯಿಂಟ್ ಮೆಂಟ್ ಕೊಡಿಸಿ ಅಂತ ಕೇಳಿಲ್ವಾ? ಬಿಜೆಪಿ ನಾಯಕರು ಅಸಹಾಯಕತೆ ವ್ಯಕ್ತಪಡಿಸಿರಲಿಲ್ವಾ? ಇದರಲ್ಲಿ ಪ್ರಧಾನಮಂತ್ರಿಗಳನ್ನು ಮಧ್ಯೆ ತರಬಾರದು ಅಂತ ಹೇಳಿದ್ರು. ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿ ಕರ್ನಾಟಕ-ತಮಿಳುನಾಡು ಸಮಸ್ಯೆ ಬಗೆಹರಿಸಲು ಆಗಲ್ವಾ? ರಾಜಕೀಯಕ್ಕೆ ಮಾತಾಡೋದು ಬೇಡ. ಸಕಾರಾತ್ಮಕವಾಗಿ ಸರ್ಕಾರದ ಜೊತೆ ಸ್ಪಂದಿಸಿ ಎಂದರು