ಮುಖೇಶ್ ಅಂಬಾನಿ ಮನೆ ಹೊರಗೆ ಜಿಲಿಟಿನ್‌ ತುಂಬಿದ ವಾಹನ ಪತ್ತೆ

Prasthutha|

- Advertisement -

ಹೊಸದಿಲ್ಲಿ : 20 ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಎಸ್ ಯುವಿ ಕಾರೊಂದು ಗುರುವಾರ ಸಂಜೆ ಮುಂಬೈನ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ದಲ್ಲಿ ಪತ್ತೆಯಾಗಿದೆ.

ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಸ್ಕಾರ್ಪಿಯೋ ಪೆದ್ದರ್ ರಸ್ತೆಯ ಪ್ರಸಿದ್ಧ ಆಂಟಿಲಿಯಾ ಬಳಿ ಈ ಕಾರು ಪತ್ತೆಯಾಗಿದೆ ಎನ್ನಲಾಗಿದೆ. ಇಂದು ಸಂಜೆ ಈ ವಾಹನ ವು ಪತ್ತೆಯಾಗಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಸ್ ಯುವಿಯನ್ನು ತಪಾಸಣೆ ನಡೆಸುತ್ತಿದ್ದಾರೆ.

Join Whatsapp