ಅಂಬಾಲಾ ಜೈಲಿನ ಮಣ್ಣು ಬಳಸಿ ಗೋಡ್ಸೆ ಸ್ಮಾರಕ ನಿರ್ಮಾಣ: ಹಿಂದೂ ಮಹಾಸಭಾ

Prasthutha|

►ಪ್ರತಿ ರಾಜ್ಯದಲ್ಲೂ ಗೋಡ್ಸೆ ಸ್ಮಾರಕ ನಿರ್ಮಾಣ

- Advertisement -

ನವದೆಹಲಿ:  ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಸ್ಮಾರಕವನ್ನು ಅಂಬಾಲಾ ಜೈಲಿನ ಮಣ್ಣಿನಿಂದ ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿದೆ.

ಈ ಬಗ್ಗೆ ಮಾತನಾಡಿದ ಹಿಂದೂ  ಮಹಾಸಭಾದ ಉಪಾಧ್ಯಕ್ಷ ಡಾ. ಜೈವೀರ್ ಭಾರಧ್ವಾಜ್ , 1949ರಲ್ಲಿ  ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಅವರನ್ನು ನೇಣಿಗೇರಿಸಿದ ಹರ್ಯಾಣದ ಅಂಬಾಲಾ ಜೈಲಿನಿಂದ ತಂದಿರುವ ಮಣ್ಣಿನಿಂದ ಇಬ್ಬರ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಅಲ್ಲದೆ, ಗ್ವಾಲಿಯರ್ ನಲ್ಲಿನ ಹಿಂದೂ ಮಹಾಸಭಾ ಕಚೇರಿಯಲ್ಲಿ ನಿರ್ಮಾಣ ಮಾಡಲಿರುವ ಸ್ಮಾರಕಕ್ಕೆ ಜೈಲಿನ ಮಣ್ಣನ್ನು ಬಳಸಲಾಗುವುದು ಎಂದು ಹೇಳಿದ್ದಾರೆ.

Join Whatsapp