BSF ಅಧಿಕಾರ ವ್ಯಾಪ್ತಿ ನಿರ್ಧಾರದ ವಿರುದ್ಧ ಇಂದು ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಮಂಡಣೆ

Prasthutha|

ಕೋಲ್ಕತ್ತಾ: ರಾಜ್ಯಗಳಲ್ಲಿ BSF ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಬಂಗಾಳ ವಿಧಾನಸಭೆ ಇಂದು ನಿರ್ಣಯ ಮಂಡಿಸಲಿದೆ.

- Advertisement -

ಅಂತಾರಾಷ್ಟ್ರೀಯ ಗಡಿ ರಾಜ್ಯಗಳಲ್ಲಿ BSF ಅಧಿಕಾರ ವ್ಯಾಪ್ತಿಯನ್ನು 50 ಕಿ.ಮೀ.ಗೆ ವಿಸ್ತರಿಸುವ ನಿರ್ಧಾರವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ, ಪಂಜಾಬ್, ಅಸ್ಸಾಂ ಮತ್ತು ಬಂಗಾಳ ರಾಜ್ಯಗಳ ಗಡಿಗಳ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ, ದಾಳಿ ಮತ್ತು ಬಂಧಿಸುವ ಅಧಿಕಾರವನ್ನು BSF ಹೊಂದಿರುತ್ತದೆ. ಮೊದಲು ಈ ಅಧಿಕಾರ 15 ಕಿ.ಮೀ ವ್ಯಾಪ್ತಿಗೊಳಪಟ್ಟಿತ್ತು.

ಕೇಂದ್ರದ ಹೊಸ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆ ಈಗಾಗಲೇ ನಿರ್ಣಯವನ್ನು ಅಂಗೀಕರಿಸಿದೆ.

Join Whatsapp