ಗೋದ್ರಾ ರೈಲು ಸುಟ್ಟ ಪ್ರಕರಣ: ಶಿಕ್ಷೆಗೊಳಗಾದವರು ಅವಧಿಪೂರ್ವ ಬಿಡುಗಡೆಗೆ ಅರ್ಹರಲ್ಲ: ಗುಜರಾತ್ ಸರಕಾರ

Prasthutha|

ನವದೆಹಲಿ: 2002ರ ಗೋದ್ರಾ ರೈಲು ಸುಟ್ಟ ಪ್ರಕರಣದಲ್ಲಿ ಶಿಕ್ಷಿತರಾದವರ ಜಾಮೀನು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪರಿಗಣನೆಗೆ ತೆಗೆದುಕೊಂಡಿದ್ದು, ಸಿಜೆಐ ಡಿ. ವೈ. ಚಂದ್ರಚೂಡ್, ಜಸ್ಟಿಸ್ ಪಿ. ಎಸ್. ನರಸಿಂಹ, ಜಸ್ಟಿಸ್ ಜೆ. ಬಿ. ಪರ್ದಿವಾಲ ಅವರಿದ್ದ ಪೀಠದೆದುರು ವಿಚಾರಣೆ ನಡೆಯಿತು.

- Advertisement -

ಗುಜರಾತ್ ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾದರು. ಇದನ್ನು ತೀವ್ರ ಅಪರಾಧ ಎಂದೂ ತೀರಾ ಅಪರೂಪದ ಪ್ರಕರಣ ಎಂದೂ ಪರಿಗಣಿಸಬೇಕು. ಗುಜರಾತ್ ರಾಜ್ಯದ ಟಾಡಾ ಕಾಯ್ದೆಯ ಪ್ರಕಾರ ಈ ಪ್ರಕರಣದ ಶಿಕ್ಷಿತರನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಕೋರ್ಟಿಗೆ ಹೇಳಿದರು.

ಈ ಪ್ರಕರಣದಲ್ಲಿ ಶಿಕ್ಷಿತರ ಪಾತ್ರ ತುಂಬ ತುಂಬ ವಿಶೇಷವಾದುದು ಎಂದು ತುಷಾರ್ ಮೆಹ್ತಾ ಹೀಗೆ ಹೇಳಿದರು;

- Advertisement -

“ಇದು 59 ಜನರು ಜೀವಂತ ಸುಡಲ್ಪಟ್ಟ ಪ್ರಕರಣ. ಜನರಿದ್ದ ಬೋಗಿಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು ಎಂಬುದನ್ನು ಗಮನಿಸಬೇಕು. ಸತ್ತ 59 ಜನರಲ್ಲಿ ಹೆಂಗಸರು ಮಕ್ಕಳು ಇದ್ದರು. ಮೊದಲು ಶಿಕ್ಷಿತನಾದವನು ತೀರ್ಪನ್ನು ಪ್ರಶ್ನಿಸಿದ್ದನು. ಆತನನ್ನು ಗುರುತಿಸುವ ಪರೀಕ್ಷೆಯಲ್ಲಿ ಹಿಡಿಯಲಾಗಿತ್ತು. ಒಳಗಿದ್ದ ಪ್ರಯಾಣಿಕರು ಹೊರ ಬರಬಾರದು ಎಂಬಂತೆ ಆದ ಕಲ್ಲು ಹೊಡೆಯುತ್ತಿದ್ದ. ಎರಡನೆಯ ಶಿಕ್ಷಿತ ಅಪರಾಧಿಯ ಕೃತ್ಯ ಸ್ಪಷ್ಟವಿದೆ. ಮೂರನೆಯ ಶಿಕ್ಷಿತನಿಗೆ ಸಂಬಂಧಿಸಿದಂತೆ ಆತನ ಬಳಿ ಮಾರಣಾಂತಿಕ ಆಯುಧ ಪತ್ತೆಯಾಗಿದೆ. ನಾಲ್ಕನೆಯ ಶಿಕ್ಷಿತನು ಈ ಸಂಚನ್ನು ರೂಪಿಸಿದ ಪ್ರಮುಖನಾಗಿದ್ದಾನೆ. ಅವನು ಪೆಟ್ರೋಲು ಖರೀದಿಸಿದ್ದಾನೆ, ಅದನ್ನು ಸ್ಟೋರ್ ಮಾಡಿದ್ದಾನೆ, ಪೆಟ್ರೋಲು ಸಾಗಿಸಿದ್ದಾನೆ ಮತ್ತು ಸುಡಲು ಬಳಸಿದ್ದಾನೆ.”

ವೈದ್ಯಕೀಯ ಕಾರಣಕ್ಕಾಗಿ ಒಬ್ಬನಿಗೆ ಜಾಮೀನು ನೀಡಲಾಗಿರುವುದನ್ನು ಸಿಜೆಐ ಚಂದ್ರಚೂಡ್ ತಿಳಿಸಿದರು. 2022ರ ಮೇ 13ರಂದು ಅಬ್ದುಲ್ ರೆಹಮಾನ್ ದಾಂತಿಯಾರಿಗೆ ಜಾಮೀನು ನೀಡಲಾಗಿದೆ. ಆತನು ಮಗಳು ಬುದ್ಧಿಮಾಂದ್ಯಳಿದ್ದುದರಿಂದ ಮತ್ತು ಆತನ ಹೆಂಡತಿ ಕೊನೆಯ ಹಂತದ ಕ್ಯಾನ್ಸರ್ ಬಾಧಿತನಾಗಿದ್ದುದರಿಂದ ಆರು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. 2022ರ ನವೆಂಬರ್ 11ರಂದು ಕೋರ್ಟ್ ಆತನ ಜಾಮೀನನ್ನು 2023ರ ಮಾರ್ಚ್ 31ರವರೆಗೆ ವಿಸ್ತರಿಸಿತ್ತು ಎಂದೂ ಅವರು ಹೇಳಿದರು. 



Join Whatsapp