ಗೋವಾ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವುದು ಬರೇ ಗಾಳಿ ಸುದ್ದಿ: ದಿನೇಶ್ ಗುಂಡೂರಾವ್

Prasthutha|

ಪಣಜಿ: ಪಣಜಿಯ ಹೋಟೆಲೊಂದರಲ್ಲಿ ಕಾಂಗ್ರೆಸ್ಸಿನ 11 ಮಂದಿ ಶಾಸಕರು ಸಭೆ ಸೇರಿ ಚರ್ಚಿಸಿದ್ದನ್ನು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಗಾಳಿ ಸುದ್ದಿ ಹಬ್ಬಿಸಲಾಗಿದೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವುದಿಲ್ಲ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂ ರಾವ್ ಸ್ಪಷ್ಟಪಡಿಸಿದ್ದಾರೆ.

- Advertisement -

ಸೋಮವಾರದಿಂದ ಗೋವಾ ವಿಧಾನ ಸಭೆಯ ಮುಂಗಾರು ಅಧಿವೇಶನ ಆರಂಭವಾಗುತ್ತದೆ. ಅದಕ್ಕೆ ಮೊದಲು ಕಾಂಗ್ರೆಸ್ ಶಾಸಕರು ಸೇರಿ ಚರ್ಚಿಸಿದರು.

ಶಾಸಕರ ಸಭೆಯಲ್ಲಿ ಉಸ್ತುವಾರಿ ದಿನೇಶ್ ಗುಂಡೂ ರಾವ್ ಕೂಡ ಇದ್ದರು. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವುದೆಲ್ಲ ಬರೀ ಗಾಳಿ ಸುದ್ದಿ. ಮುಂಗಾರು ಅಧಿವೇಶನದಲ್ಲಿ ಏನೆಲ್ಲ ವಿಚಾರವಾಗಿ ಚರ್ಚೆ ನಡೆಸಬೇಕು ಎಂಬುದರ ಬಗ್ಗೆ ಶಾಸಕರು ಸಭೆ ಸೇರಿದರೇ ಹೊರತು ಪಕ್ಷಾಂತರದ ಬಗ್ಗೆ ಚರ್ಚಿಸಲು ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

- Advertisement -

ಮೇ ತಿಂಗಳಲ್ಲಿ ಬಿಜೆಪಿಯ ರಾಜ್ಯ ಉಸ್ತುವಾರಿ ಸಿ. ಟಿ. ರವಿಯವರು ಬಿಜೆಪಿ ಇತರ ಐವರನ್ನು ಸೇರಿಸಿ 20 ಶಾಸಕರನ್ನು ಹೊಂದಿದೆ, ಕೆಲವೇ ತಿಂಗಳೊಳಗೆ ನಮ್ಮ ಶಾಸಕರ ಸಂಖ್ಯೆ 30 ಆಗುತ್ತದೆ ಎಂದು ಹೇಳಿದ್ದರು. ಆಗಿನಿಂದಲೂ ಕಾಂಗ್ರೆಸ್ ಶಾಸಕರ ಪಕ್ಷಾಂತರದ ಸುದ್ದಿ ಹರಡುತ್ತಲೇ ಇದೆ.

2019ರಲ್ಲಿ ಕಾಂಗ್ರೆಸ್ಸಿನ 10 ಶಾಸಕರು ಬಿಜೆಪಿ ಸೇರಿದ್ದರು.

“ನಮ್ಮ ಈಗಿನ 11 ಶಾಸಕರಲ್ಲಿ 8 ಶಾಸಕರು ಹೊಸಬರು. ನಮ್ಮ ಹಿರಿಯ ಶಾಸಕರು ಹೊಸ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರೆಲ್ಲ ಕುಸಿದಿರುವ ಬಿಜೆಪಿ ಆಡಳಿತದ ವಿರುದ್ಧ ಧ್ವನಿ ಎತ್ತುತ್ತಾರೆ ನೋಡಿ” ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟೇಕರ್ ಹೇಳಿದರು.

ಬಿಜೆಪಿಯು ಬರೇ ಗಾಳಿ ಸುದ್ದಿ ಹರಡುವುದು ಮತ್ತು ಜನರನ್ನು ಗೊಂದಲದಲ್ಲಿಡುವುದರ ಹೊರತು ಬೇರೇನನ್ನೂ ಮಾಡುತ್ತಿಲ್ಲ ಎಂದು 40 ಶಾಸಕ ಬಲದ ಗೋವಾ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮೈಕೆಲ್ ಲೋಬೋ ಹೇಳಿದರು.

ಎಲ್ಲ ಶಾಸಕರು ಅವರ ಕ್ಷೇತ್ರದ್ದು ಮಾತ್ರವಲ್ಲ ರಾಜ್ಯದ ಸಮಸ್ಯೆಗಳ ಬಗೆಗೆ ಪ್ರಶ್ನೆ ಎತ್ತಬೇಕು ಎಂದು ಚರ್ಚೆ ನಡೆಯಿತು ಎಂದು ದಿನೇಶ್ ಗುಂಡೂರಾವ್  ಹೇಳಿದರು. ಮರ್ಮ ಗೋವಾ ಬಂದರು ಮಂಡಳಿಯಲ್ಲಿ ಕಲ್ಲಿದ್ದಲು ನಿರ್ವಹಣೆಯ ಅವ್ಯವಹಾರದ ಬಗೆಗೆ ಪ್ರಶ್ನೆ ಎತ್ತಲಾಗುವುದು ಎಂದೂ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಕಾನಕೋನದಲ್ಲಿ ಒಂದು ಸಭೆಯಲ್ಲಿದ್ದಾರೆ. ಅವರು ಈ ಸಭೆಗೆ ಬಂದಿಲ್ಲ. ಆದರೆ ಮೊದಲೇ ಅವರು ಹೊಸ ಶಾಸಕರಿಗೆ ಮಾರ್ಗದರ್ಶನ ನೀಡಿದ್ದರು ಎಂದು ಪಾಟ್ಕರ್ ತಿಳಿಸಿದರು.

“ಪ್ರತಿಪಕ್ಷ ನಾಯಕ ಲೋಬೋ ಮತ್ತು ಅವರ ಪತ್ನಿ ಹೊಂದಿರುವ ಆಸ್ತಿಯ ಬಗೆಗೆ ನಗರ ಯೋಜನೆ ಖಾತೆಯನ್ನೂ ಹೊಂದಿರುವ ವಿಶ್ವಜಿತ್ ರಾಣೆಯವರು ನೋಟೀಸು ನೀಡಿದ್ದಾರೆ. ಇದು ಬಿಜೆಪಿಯ ತೊಂದರೆ ಕೊಡುವ ರಾಜಕೀಯ. ಮೈಕೆಲ್ ಲೋಬೋ ಮತ್ತು ದೆಲಿಲಾ ಲೋಬೋರವರು ಕೋರ್ಟಿಗೆ ಹೋಗಿ ತಮ್ಮ ಪರ ತೀರ್ಪು ಪಡೆದಿದ್ದಾರೆ. ಪ್ರತಿಪಕ್ಷದ ನಾಯಕರಾಗಲಿ, ಕಾಂಗ್ರೆಸ್ಸಾಗಲಿ ಸುಮ್ಮನಾಗುವುದಿಲ್ಲ” ಎಂದು ಗುಂಡೂರಾವ್ ಹೇಳಿದರು. 

Join Whatsapp