ಅತಿವೇಗದ ಏಕಾಂಗಿ ಸೈಕಲ್ ಸವಾರಿ ದಾಖಲೆ ನಿರ್ಮಿಸಿದ ಯೋಧ; ಬರೀ 36 ಗಂಟೆಗಳಲ್ಲಿ 650ಕಿ. ಮೀ. ಸವಾರಿ

Prasthutha|

ಬೆಂಗಳೂರು: ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ನಲ್ಲೇ ಬರೀ 36 ಗಂಟೆಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮೂಲಕ ಯೋಧರೊಬ್ಬರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

- Advertisement -

ಬೆಂಗಳೂರಿನ 515 ಆರ್ಮಿ ಬೇಸ್‌ ನ ಕ್ರಾಫ್ಟ್ಸ್ ಮ್ಯಾನ್ ರಾಹುಲ್‌ ಕುಮಾರ್ ಜುಲೈ 8-9ರ ಒಟ್ಟು 36 ಗಂಟೆಗಳಲ್ಲಿ 650 ಕಿ.ಮೀ. ದೂರವನ್ನು ಕ್ರಮಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಇವರು ಪುರುಷರ ವಿಭಾಗದಲ್ಲಿ ಅತಿವೇಗದ ಏಕಾಂಗಿ ಸೈಕಲ್ ಸವಾರಿ ಎಂಬ ದಾಖಲೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ನಲ್ಲಿ ಬರೆದಿದ್ದಾರೆ.

ಫಿಟ್‌ ನೆಸ್ ಎ ವೇ ಆಫ್ ಲೈಫ್’ ಎಂಬುದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ರಿಗೇಡಿಯರ್ ಎಂಆರ್‌ ಕೆ ರಾಜೇಶ್‌ ಪಣಿಕರ್, ಬ್ರಿಗೇಡಿಯರ್ ಅಲೋಕ್ ಜೈನ್ ಅವರು ಜು. 8ರ ಬೆಳಗ್ಗೆ 6ಕ್ಕೆ ಬೆಂಗಳೂರಿನ 515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು. ರಾಹುಲ್ ಜು.9ರಂದು ತಮಿಳುನಾಡಿನ ಕನ್ಯಾಕುಮಾರಿಯನ್ನು ತಲುಪಿದ್ದರು.

- Advertisement -

ಹೊಸೂರು, ಸೇಲಂ, ಮಧುರೈ ಮೂಲಕ ಈ ಪ್ರಯಾಣ ಸಾಗಿದ್ದು, ಪ್ರಯಾಣದುದ್ದಕ್ಕೂ ಮಳೆಯಾಗುತ್ತಿದ್ದರೂ ಇವರು ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಆನ್‌ ಲೈನ್‌ನಲ್ಲೇ ನಿಗಾ ವಹಿಸಿತ್ತು.

Join Whatsapp