ಕೆಂಜಾರು ಗೋಶಾಲೆ ನೆಲಸಮ । ಸರ್ಕಾರಿ ಜಾಗ ಅತಿಕ್ರಮಣದ ಆರೋಪ

Prasthutha|

- Advertisement -

ಮಂಗಳೂರು: ಕೆಂಜಾರು ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅಲ್ಲಿ ಗೋಶಾಲೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಗುರುವಾರದಂದು ಜಿಲ್ಲಾಡಳಿತದ ವತಿಯಿಂದ ಗೋಶಾಲೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ಕೇಂದ್ರದ ಕೋಸ್ಟ್ ಗಾರ್ಡ್ ತರಬೇತಿ ಅಕಾಡಮಿ ನಿರ್ಮಾಣಕ್ಕೆ ಬೇಕಾಗಿನ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಕಪಿಲಾ ಗೋಶಾಲೆಯು ಸರ್ಕಾರಿ ಜಾಗವನ್ನು ಅತಿಕ್ರಮಿಸಿದ್ದಾಗಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಇಂದು ಜೆಸಿಬಿ ಮೂಲಕ ಗೋಶಾಲೆಯನ್ನು ನೆಲಸಮಗೊಳಿಸಿದ್ದಾರೆ.

ಈ ಜಾಗವು 1993ರಿಂದಲೇ  ಸರ್ಕಾರದ ಅಧೀನದಲ್ಲಿದೆ ಮತ್ತು  ಹತ್ತು ವರ್ಷಗಳ ಹಿಂದೆ ಪ್ರಕಾಶ್ ಶೆಟ್ಟಿ ಎನ್ನುವವರು ಈ ಜಾಗವನ್ನು ಖರೀದಿಸಿದ್ದರು. ಈ ಜಮೀನಿನ ಹಳೆಯ ಯಜಮಾನ ಮೃತಪಟ್ಟಿದ್ದು ಪ್ರಕಾಶ್ ಶೆಟ್ಟಿಯವರ ಇಂಟರ್ ಲಾಕ್ ಫಾಕ್ಟರಿಯೂ ಈಗ ನೆಲಸಮವಾಗಿದೆ.



Join Whatsapp