ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಅಣ್ಣಿಗೇರಿಯ ಆದಿವಾಸಿಗಳಿಗೆ ಹಕ್ಕುಪತ್ರ ನೀಡಿ: ಅಫ್ಸರ್ ಕೊಡ್ಲಿಪೇಟೆ

Prasthutha|

ಧಾರವಾಡ: ಅಣ್ಣಿಗೇರಿಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಅಲ್ಲಿನ 110 ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇವೆ. ಹಕ್ಕುಪತ್ರ ಮತ್ತು ಮನೆಗಳನ್ನು ನೀಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಎಚ್ಚರಿಸಿದ್ದಾರೆ.

- Advertisement -

ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಉತ್ತಮ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದು, ಎಸ್ಡಿಪಿಐ ಮನವಿಗೆ ಸ್ಪಂದಿಸಿ ಅರ್ಧ ದಶಕಗಳಿಂದ ಇರಲು ಮನೆ ಇಲ್ಲದೆ ಮೂಲ ಸೌಕರ್ಯಗಳ ವಂಚಿತ ಪ್ರಾಣಿಗಳಂತೆ ಬದುಕುತ್ತಿರುವ 100 ಕ್ಕೂ ಅಧಿಕ ಬಡ ಆದಿವಾಸಿ ಕುಟುಂಬಗಳ ನೋವಿಗೆ ಸ್ಪಂದಿಸುವ ಭರವಸೆ ಇದೆ ಎಂದು ಅಭಿಪ್ರಾಯಪಟ್ಟರು .

ಎಸ್ಡಿಪಿಐ ನಿಯೋಗ ಹರಣಿ ಶಿಕಾರಿ ಆದಿವಾಸಿಗಳ ಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ “ನಮ್ಮನ್ನು ದರಿದ್ರರು ಅಂತ ಹೇಳಿ, ನಿಮಗೆ ಜಾಗ, ಮನೆ ಕೊಡಲ್ಲ, ಊರು ಬಿಟ್ಟು ಹೋಗಿ ಎಂದು ದೌರ್ಜನ್ಯ ಎಸಗುತ್ತಿದ್ದಾರೆ. ಇದರ ಬದಲು ನಮಗೆ ವಿಷ ಕೊಟ್ಟು ಬಿಡಿ” ಎಂದು ಅಲ್ಲಿನ ಜನ ಜೈ ಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷರಾದ ಧರ್ಮರಾಜು ಹರಣಿ ಶಿಕಾರಿ ಹಾಗೂ ಉಪಾಧ್ಯಕ್ಷ ಬಸಣ್ಣ ಹರಣ ಶಿಕಾರಿ ಅವರ ನೇತೃತ್ವದಲ್ಲಿ ಅಲ್ಲಿನ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ನೋವಿಗೆ ಸರ್ಕಾರ ತಕ್ಷಣವೆ ಸ್ಪಂದಿಸಬೇಕು. ಅವರಿಗೆ ನ್ಯಾಯ ಸಿಗುವವರೆಗೆ ಎಸ್ಡಿಪಿಐ ಪಕ್ಷ ಅವರ ಪರವಾಗಿ ಹೋರಾಟ ರೂಪಿಸಿ ಅವರ ಜೂತೆ ನಿಲ್ಲಲಿದೆ.

- Advertisement -

ಅದೇ ರೀತಿ ನವಲಗುಂದ ರಸ್ತೆಯ ರೇಲ್ವೆ ಗೇಟ್ ಹತ್ತಿರ ಜನಾಬ ಮಾಬೂಸಾಬ ಮಹ್ಮದಸಾಬ ಗಾಡಗೋಳಿ ಎಂಬುವವರು ಸರ್ವೇ ನಂ.: 1070/4 ಕ್ಷೇತ್ರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದಿವೆ ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಅದರ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಗಮನ ಹರಿಸಬೇಕು.

ಆಗಸ್ಟ್ 9 ರ ವಿಶ್ವ ಬುಡಕಟ್ಟು ಜನರ ದಿನಕ್ಕೆ ಅರ್ಥ ಬರಬೇಕಾದರೆ ಎಲ್ಲಾ ಆದಿವಾಸಿ/ಅಲೆಮಾರಿಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್ಟಿಆರ್ಐ) ಹರಣ ಶಿಕಾರಿ ಬುಡಕಟ್ಟು ಜನಾಂಗದ  ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಸಹ ಅಪ್ಸರ್ ಕೊಡ್ಲಿಪೇಟೆ ಸರ್ಕಾರವನ್ನು ಆಗ್ರಹಿಸಿದರು .

 ಪತ್ರಿಕಾಗೊಷ್ಠಿಯಲ್ಲಿ   ಧರ್ಮರಾಜು ಹರಣಿ ಶಿಕಾರಿ, ಜೈ ಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ,  ಬಸಣ್ಣ ಹರಣ ಶಿಕಾರಿ, ಉಪಾಧ್ಯಕ್ಷ ,  ಮಕ್ತುಮ್ ಹುಸೇನ್ ಹೊಸಮನಿ, ಎಸ್ಡಿಪಿಐ ಧಾರವಾಡ ಜಿಲ್ಲಾಧ್ಯಕ್ಷರಾದ , ಗಪೂರ್ ಕುರಟ್ಟಿ, ಎಸ್ಡಿಪಿಐ ಧಾರವಾಡ ಪ್ರದಾನ ಕಾರ್ಯದರ್ಶಿ , ಡಾ. ವಿಜಯ ಎಮ್ ಗುಂಟ್ರಾಳ, ಎಸ್ಡಿಪಿಐ ಧಾರವಾಡ  ಉಪಾಧ್ಯಕ್ಷರು ಹಾಜರಿದ್ದರು.



Join Whatsapp