ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

Prasthutha|

ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ.

- Advertisement -


ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ಸಂಸತ್ತಿನ ಉಭಯ ಸದನಗಳಲ್ಲಿ ನಿರಂತರವಾಗಿ ಗದ್ದಲ ನಡೆಯುತ್ತಲೇ ಇತ್ತು.


ಕೇವಲ ಇಂಡಿಯಾ ಒಕ್ಕೂಟ ಮಾತ್ರವಲ್ಲದೆ ಬಿಆರ್ಎಸ್ ಪಕ್ಷ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಸಲ್ಲಿಸಿದೆ. ಪ್ರಧಾನಿ ಮೋದಿಯವರು ಈ ಕುರಿತು ಮೌನ ಮುರಿಯಬೇಕು ಆಗ ಮಾತ್ರ ದೇಶದ ಜನರಲ್ಲಿ ಶಾಂತಿ ನೆಲೆಸುತ್ತದೆ ಆದ್ದರಿಂದ ಈ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬಿಆರ್ಎಸ್ ಸಂಸದ ನಾಮ ನಾಗೇಶ್ವರ ತಿಳಿಸಿದ್ದಾರೆ.

- Advertisement -


ಅಧಿವೇಶನ ಆರಂಭವಾದಾಗಿನಿಂದ ಎಲ್ಲಾ ಪ್ರತಿಪಕ್ಷಗಳ ನಾಯಕರು ಮಣಿಪುರ ವಿಷಯದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆಯಲ್ಲಿ 543 ಸದಸ್ಯರಿದ್ದು, ಆಡಳಿತಾರೂಢ ಎನ್ಡಿಎ ಪ್ರಸ್ತುತ 331 ಬಲವನ್ನು ಹೊಂದಿದೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಸದನದಲ್ಲಿ 144 ಸದಸ್ಯ ಬಲ ಹೊಂದಿದೆ.

Join Whatsapp