ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಅಪಹರಿಸಿ ಥಳಿಸಿದ ಬಾಲಕಿಯ ತಂದೆ

Prasthutha|

ಮುಂಬೈ: 12 ವರ್ಷದ ಬಾಲಕಿಗೆ 24 ವರ್ಷದ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದಕ್ಕೆ ಬಾಲಕಿಯ ತಂದೆ ತನ್ನ ಕೆಲವು ಸ್ನೇಹಿತರೊಂದಿಗೆ ಸೇರಿ ಯುವಕನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ನಡೆದಿದೆ.

- Advertisement -

ಈ ಸಂಬಂಧ ಪೊಲೀಸರು ಬಾಲಕಿಯ ತಂದೆ ಮತ್ತು ಆತನ ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಕಿರುಕುಳ ನೀಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಯುವಕನು ಸಂತ್ರಸ್ತೆಯ ಪ್ರದೇಶದಲ್ಲಿ ವಾಸಿಸುತಿದ್ದು, ಬಾಲಕಿಯು ತನ್ನ ತಂದೆಯೊಂದಿಗೆ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ, ತಂದೆ ಕೋಪಗೊಂಡು ತನ್ನ ಐವರು ಸ್ನೇಹಿತರೊಂದಿಗೆ ಯೋಜನೆ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಭಾನುವಾರ ಮಧ್ಯಾಹ್ನ ಕಲ್ಯಾಣ್ ನ ಶಿವಾಜಿ ಚೌಕ್ ಪ್ರದೇಶದಿಂದ ಯುವಕನನ್ನು ಅಪಹರಿಸಿ ಕಲ್ಯಾಣ್ ನ ಎಪಿಎಂಸಿ ಮಾರುಕಟ್ಟೆಯ ಹಿಂದಿನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಥಳಿಸಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.

ಎರಡೂ ಕಡೆಯವರು ದೂರು ದಾಖಲಿಸಿದ್ದರಿಂದ ಹಲ್ಲೆ ಮತ್ತು ಅಪಹರಣದ ಆರೋಪದ ಮೇಲೆ ಬಾಲಕಿಯ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಕಿರುಕುಳ ನೀಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

Join Whatsapp