ಬಾಯ್ ಫ್ರೆಂಡ್’ನ್ನು ಇಂಪ್ರೆಸ್ ಮಾಡಲು ಹೋಗಿ 2 ಜೀವ ತೆಗೆದ ಗೆಳತಿ

Prasthutha|

ಛತ್ತೀಸ್ ಗಡ: ಯುವಕನೊಬ್ಬ ಡ್ರೈವಿಂಗ್ ಬಾರದ ತನ್ನ ಗೆಳತಿಗೆ ಕಾರು ಚಲಾಯಿಸಲು ಕೊಟ್ಟಿದ್ದು, ಡ್ರೈವಿಂಗ್ ತಿಳಿಯದ ಆಕೆ ಬೈಕ್ ಗೆ ಗುದ್ದಿ ಇಬ್ಬರನ್ನು ಬಲಿತೆಗೆದುಕೊಂಡ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.

- Advertisement -


ಶುಕುವಾರ ಬಾಯಿ ಕೇವತ್, ಜೇತಾರಾಮ್ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯು ಬಿಲಾಸ್ ಪುರದ ಕೋಟಾ ರಸ್ತೆಯಲ್ಲಿ ನಡೆದಿದೆ.


ಮುಂಗೇಲಿ ಬಡಾವಣೆಯ ನಿವಾಸಿ ರವೀಂದ್ರ ಕುರ್ರೆ ಗೆಳತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದನು. ಈ ವೇಳೆ ರವೀಂದ್ರ ತನ್ನ ಗೆಳತಿಗೆ ಕಾರು ಚಲಾಯಿಸಲು ಕೊಟ್ಟಿದ್ದಾನೆ. ಡ್ರೈವಿಂಗ್ ಬಾರದಿದ್ದರೂ ಆಕೆ ಬಾಯ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಲು ಕಾರು ಚಲಾಯಿಸಿದ್ದಾಳೆ. ಕಾರನ್ನು ಸ್ವಲ್ಪ ದೂರ ಓಡಿಸಿದ ನಂತರ ಎಕ್ಸ್ ಲೇಟರ್ ಜೋರಾಗಿ ಒತ್ತಿದ್ದಾಳೆ ಎನ್ನಲಾಗಿದೆ. ಇದರಿಂದ ಎದುರಿನಿಂದ ಬಂದ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

Join Whatsapp