ಗುಲಾಂ ನಬಿ ಆಝಾದ್ ರಿಂದ ‘ಡೆಮಾಕ್ರೆಟಿಕ್ ಆಜಾದ್ ಫೋರ್ಸ್’ ಎಂಬ ಹೊಸ ಪಕ್ಷ ಆರಂಭ

Prasthutha|

ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದಿದ್ದ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡೆಮಾಕ್ರೆಟಿಕ್ ಆಜಾದ್ ಫೋರ್ಸ್ ಎಂಬ ಹೊಸ ಪಕ್ಷವನ್ನು ಇಂದು ಶ್ರೀನಗರದಲ್ಲಿ ಆರಂಭಿಸಿರುವುದಾಗಿ ಪ್ರಕಟಿಸಿದರು.

- Advertisement -

ಯಾವುದೇ ವಶೀಲಿಬಾಜಿಯಿಂದ ಮುಕ್ತವಾದ ಜಾತ್ಯತೀತ, ಪ್ರಜಾಸತ್ತಾತ್ಮಕ, ಸ್ವತಂತ್ರ ಪಕ್ಷ ನಮ್ಮದು ಎಂದು ಈ ಸಂದರ್ಭದಲ್ಲಿ ಗುಲಾಂ ನಬಿ ಆಝಾದ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾದ ಗುಲಾಂ ನಬಿ ಆಝಾದ್ ಅವರು ಕೇಂದ್ರ ಸಚಿವರೂ ಆಗಿದ್ದವರು. ಕಾಂಗ್ರೆಸ್ ಬಿಟ್ಟು ತಿಂಗಳಾಗುವುದರೊಳಗೆ ಸೆಪ್ಟೆಂಬರ್ 26, 2022ರಂದು ತನ್ನ ಹೊಸ ಪಕ್ಷವನ್ನು ಆರಂಭಿಸಿದ್ದಾರೆ.

- Advertisement -

ಆಗಸ್ಟ್ 26ರಂದು ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಇಂದಿಗೆ ಒಂದು ತಿಂಗಳು; ಇಂದೇ ಹೊಸ ಪಕ್ಷವನ್ನು ತಮ್ಮ ಬೆಂಬಲಿಗರೊಡನೆ ಸೇರಿ ಆರಂಭಿಸಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ; ಮಿತ್ರರೂ ಅಲ್ಲ. ಜನರ ಒಳಿತಿಗಾಗಿ ದುಡಿಯಲು ಇದೊಂದು ದಾರಿ ಎಂದೂ ಅವರು ತಿಳಿಸಿದರು.