ದಿ ಕಾಶ್ಮೀರ ಫೈಲ್ಸ್ ಸಿನೆಮಾ ಎಫೆಕ್ಟ್ : ದೇಶಾದ್ಯಂತ ಮುಸ್ಲಿಮರ ಜನಾಂಗೀಯ ಹತ್ಯೆಯ ಘೋಷಣೆ

Prasthutha|

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ವಿವಾದಾತ್ಮಕ ಚಲನಚಿತ್ರ ‘ದಿ ಕಾಶ್ಮೀರ ಫೈಲ್ಸ್’ ಪ್ರದರ್ಶನದ ಬಳಿಕ ದೇಶಾದ್ಯಂತ ಮುಸ್ಲಿಮರ ವಿರುದ್ಧ ಜನಾಂಗೀಯ ಹತ್ಯೆಯ ಘೋಷಣೆ ಮೊಳಗುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

- Advertisement -

ಅನುಪಮ್ ಖೇರ್ ಅಭಿನಯಿಸಿದ ‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರ ಪಂಡಿತರ ಮೇಲಿನ ಹಿಂಸಾಚಾರ ಮತ್ತು ಹತ್ಯೆಯ ಕುರಿತು ಬೆಳಕು ಚೆಲ್ಲಿತ್ತು. ಹಿಂದುತ್ವ ಸಿದ್ದಾಂತದ ಪ್ರತಿಪಾದಕರು ಮತ್ತು ವಿಮರ್ಶಕರು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲು ಚಲನಚಿತ್ರವೊಂದನ್ನು ಧಾಳವನ್ನಾಗಿಸಿದೆ ಎಂದು ಹೇಳಲಾಗಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರ ಮಾರ್ಚ್ 11 ರಂದು ಬಿಡುಗಡೆಗೊಂಡಿತ್ತು. ಈ ಚಲನಚಿತ್ರವನ್ನು ಹಿಂದುತ್ವ ಪರ ಗುಂಪುಗಳನ್ನು ವ್ಯಾಪಕವಾಗಿ ಪ್ರಚೋದಿಸಲಾಗುತ್ತಿದೆ.

- Advertisement -

ಈ ಮಧ್ಯೆ ಮುಸ್ಲಿಮರು ನಾಯಕರಾಗಿರುವ ಬಾಲಿವುಡ್ ಸಿನೆಮಾಗಳನ್ನು ನೋಡುವುದನ್ನು ನಿಲ್ಲಿಸುವಂತೆ ಪ್ರೇಕ್ಷಕರನ್ನು ಬಲವಂತಪಡಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಪ್ರಮುಖ ನಟರಾದ ಶಾರುಖ್, ಅಮೀರ್ ಖಾನ್, ಸಲ್ಮಾನ್ ಅವರ ಚಲನಚಿತ್ರಗಳನ್ನು ವೀಕ್ಷಿಸದಂತೆ ತಾಕೀತು ಮಾಡಲಾಗುತ್ತಿದೆ. ವಿದ್ಯಾವಂತರು, ಸಂಸ್ಕಾರವಂತರು ಭಾರತೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ ಎಂದು ಹಿಂದುತ್ವವಾದಿಗಳು ಆರೋಪಿಸಿದ್ದಾರೆ.

ಸಿನಿಮಾದಲ್ಲಿ ತೋರಿಸಿದಂತೆ ಹಿಂಸಾತ್ಮಕ ಘರ್ಷಣೆಗಳು ಮಾಯಾವತಿ, ಟಿಎಂಸಿ, ಅಖಿಲೇಶ್ ರೂಪದಲ್ಲಿ ಮುಂದೊಂದು ದಿನ ಪ್ರತಿ ಹಿಂದೂಗಳ ಮನೆಗಳಿಗೆ ತಲುಪಲಿದೆ ಎಂದು ಎಚ್ಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮತ್ತೊಂದು ವೀಡಿಯೊದಲ್ಲಿ, ಯುವಕನೊಬ್ಬ, ಚಲನಚಿತ್ರವನ್ನು ನೋಡಿದ ನಂತರ ತನ್ನ ಹಿಂದೂ ಸಹೋದರರಿಗೆ ಮುಸ್ಲಿಮರ ಬಗ್ಗೆ ಎಚ್ಚರದಿಂದ ಇರುವಂತೆ ಮತ್ತು ದೂರವಿರುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ.

ಬಿಜೆಪಿ ಆಡಳಿತವಿರುವ ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ, ಗೋವಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ಮುಕ್ತ ಚಾಲನೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪತ್ರಕರ್ತ ಮತ್ತು ಸಂಪಾದಕ ರಖೀಬ್ ಹಮೀದ್ ನಾಯಕ್ ಟ್ವಿಟರ್‌ನಲ್ಲಿ “ಕಾಶ್ಮೀರ ಫೈಲ್ಸ್” ಅನ್ನು “ಸಾಮಾನ್ಯವಾಗಿ ಮುಸ್ಲಿಮರನ್ನು ಮತ್ತು ನಿರ್ದಿಷ್ಟವಾಗಿ ಕಾಶ್ಮೀರಿ ಮುಸ್ಲಿಮರನ್ನು ನಿಂದಿಸಲು ಪ್ರಮುಖ ಅಸ್ತ್ರವಾಗಿ ಆಯ್ಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಈ ಸಂಬಂಧ ದೆಹಲಿ ಮೂಲಕದ ಪತ್ರಕರ್ತೆ ಫಾತಿಮಾ ಖಾನ್ ಪ್ರತಿಕ್ರಿಯಿಸಿ “ಸಿನಿಮಾ ಏನನ್ನು ಉದ್ದೇಶಿಸಿತ್ತೋ ಅದನ್ನೇ ಮಾಡುತ್ತಿದೆ. ಥಿಯೇಟರ್‌ಗಳಲ್ಲಿ ಸಂಪೂರ್ಣವಾಗಿ ಭಯಾನಕ ದೃಶ್ಯಗಳು ಪ್ರದರ್ಶನಗೊಳ್ಳುತ್ತಿವೆ: ಕೊಲೆ ಬೆದರಿಕೆ, ದ್ವೇಷಪೂರಿತ ಘೋಷಣೆಗಳು, ಮುಸ್ಲಿಮರಿಂದ ದೂರವಿರಲು ಕರೆಗಳು ಇತ್ಯಾದಿ” ಮುಸ್ಲಿಮ ವಿರೋಧಿ ಘೋಷಣೆಗಳು ಮೊಳಗುತ್ತಿದೆ ಎಂದು ವೀಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ.

Join Whatsapp