ದೆಹಲಿ ಕೋರ್ಟ್ ಆವರಣದಲ್ಲಿ ಶೂಟೌಟ್: ಕುಖ್ಯಾತ ದರೋಡೆಕೋರ ಸೇರಿದಂತೆ ನಾಲ್ಕು ಮಂದಿ ಬಲಿ

Prasthutha|

ನವದೆಹಲಿ: ದೆಹಲಿ ನ್ಯಾಯಾಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ದರೋಡೆಕೋರ ಸೇರಿದಂತೆ ಇತರ ನಾಲ್ಕು ಮಂದಿ ಗ್ಯಾಂಗ್ ಸ್ಟರ್ ಗಳು ಬಲಿಯಾಗಿದ್ದಾರೆ. ಬಂದೂಕುಧಾರಿಗಳು ವಕೀಲರ ವೇಷದಲ್ಲಿ ಆಗಮಿಸಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಎಂಬವನನ್ನು ವಿಚಾರಣೆಗಾಗಿ ಉತ್ತರ ದೆಹಲಿಯಲ್ಲಿರುವ ರೋಹಿಣಿಯ ನ್ಯಾಯಾಲಯದ ಆವರಣಕ್ಕೆ ಕರೆದು ತಂದಾಗ ವಿರೋಧಿ ಬಣ ಗುಂಡು ಹಾರಿಸಿ ಕೊಲೆ ನಡೆಸಿದೆ. ಈ ವೇಳೆ ವಿರೋಧಿ ಬಣದ ಮೂವರು ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

- Advertisement -

ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ಜಿತೇಂದರ್ ಗೋಗಿ ಎಂಬಾತನನ್ನು ತಿಹಾರ್ ಜೈಲಿನಲ್ಲಿರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ವಕೀಲರ ವೇಷದಲ್ಲಿ ಬಂದ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಹತ್ಯೆ ನಡೆಸಿದೆ.

- Advertisement -