62 ರ ಹರೆಯದ ಮುದುಕ ಗಂಗಾಧರನ ಹೆಣ್ಣುಬಾಕತನ । ವಿಶ್ವಹಿಂದೂ ಪರಿಷತ್ ನಿಂದ ‘ಲವ್ ಜಿಹಾದ್’ ಬಣ್ಣ !

Prasthutha|

►ವಾಸ್ತವ ಬಹಿರಂಗವಾದಾಗ ಇಂಗು ತಿಂದ ಮಂಗನಂತಾದ ಸಂಘಪರಿವಾರಿಗಳು !

- Advertisement -

ಮಂಗಳೂರು : 62 ರ ಹರೆಯದ ಮಂಗಳೂರಿನ ಮುದುಕನೊಬ್ಬ ತನ್ನ ಹೆಣ್ಣುಬಾಕತನ ತೋರಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಆದರೆ ಹಾಸ್ಯಾಸ್ಪದವೆಂದರೆ ಸಿಕ್ಕ ಅವಕಾಶದಲ್ಲಿ ವಿಶ್ವ ಹಿಂದೂ ಪರಿಷತ್ ನ ಕೆಲ ಮತಾಂಧರು ತಮ್ಮ ಕುಬುದ್ಧಿ ತೋರಿಸಲು ಹೋಗಿ  ಆ ಬಳಿಕ ವಾಸ್ತವ ಹೊರ ಬಂದಾಗ ಇಂಗು ತಿಂದ ಮಂಗನಂತಾಗಿದ್ದಾರೆ. ಮಂಗಳೂರಿನ ನೀರುಳ್ಳಿ ಉದ್ಯಮಿ ಹಾಗೂ ಬಿಲ್ಡರ್ ಎಂದು ಹೇಳಲಾಗಿರುವ ಗಂಗಾಧರ್,  ಪುತ್ತೂರು ಮೂಲದ ಮುಸ್ಲಿಮ್ ಮಹಿಳೆಯೊಂದಿಗೆ ಮದುವೆಯಾಗಿರುವ ಫೋಟೊ ಆತನ ಪತ್ನಿಗೆ ಅದು ಹೇಗೋ ತಲುಪಿತ್ತು. ತನ್ನ ಗಂಡನನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಅವರಿಗೆ ಬೇರೆ ಮದುವೆ ಮಾಡಿಸಲಾಗಿದೆ ಎಂದು ಪತ್ನಿ ಯಶೋಧಾ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು.

ಇದು ಜಾಲ ತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿ, ಮಧ್ಯೆ ವಿಶ್ವಹಿಂದೂ ಪರಿಷತ್ ನ ಕೆಲ ಮತಾಂಧ ಪುಂಡರು ಘಟನೆಗೆ ಧಾರ್ಮಿಕ ಬಣ್ಣ ಬಳಿದಿದ್ದಾರೆ. ಸಂಘಟನೆಯ ನಾಯಕನೋರ್ವ ಸಾಮಾಜಿಕ ತಾಣದಲ್ಲಿ ಇದು ವ್ಯವಸ್ಥಿತ ‘ಲವ್ ಜಿಹಾದ್’. ಹುಡುಗಿಯರನ್ನು ಮುಂದಿಟ್ಟುಕೊಂಡು ಹಿಂದೂಗಳನ್ನು ವಂಚಿಸಲಾಗುತ್ತಿದೆ ಎಂದೆಲ್ಲಾ ಬರೆದು ತನ್ನ ಮತಾಂಧತೆಯ ವಿಷಕಾರಿಕೊಂಡಿದ್ದ. ಅದಕ್ಕೆ ಇತರರೂ ಧ್ವನಿಗೂಡಿಸಿ, ಈ ಕುರಿತು ತನಿಖೆಯಾಗಬೇಕೆಂದು ಕೂಡಾ ಆಗ್ರಹ ಕೇಳಿ ಬಂದಿತ್ತು. ಆದರೆ ವಾಸ್ತವದಲ್ಲಿ ಪೊಲೀಸ್ ತನಿಖೆ ನಡೆದಾಗ ಎಲ್ಲಾ ಪುಂಡರು ಇಂಗು ತಿಂದ ಮಂಗನಂತಾಗಿದ್ದಾರೆ.

- Advertisement -

ಘಟನೆಯ ವಾಸ್ತವವೇನು ?

ಹೆಣ್ಣುಬಾಕ ಗಂಗಾಧರ್, ಮದುವೆ ಬ್ರೋಕರ್ ಗಳಾಗಿರುವ ತನ್ನ ಸ್ನೇಹಿತರಿಬ್ಬರ ಮೂಲಕ ತಾನು ಇಸ್ಲಾಂ ಗೆ ಮತಾಂತರವಾಗಿದ್ದೇನೆ, ನಾನೋರ್ವ ಮುಸ್ಲಿಮ್ ಎಂದು ನಂಬಿಸಿ ಪುತ್ತೂರು ಮೂಲದ ವಿಧವಾ ಮಹಿಳೆಯೋರ್ವಳನ್ನು ಜನವರಿಯಲ್ಲಿ ಮದುವೆಯಾಗಿದ್ದ. ಆಕೆಯನ್ನು ಮಂಗಳೂರಿನ ಫ್ಲಾಟ್ ಒಂದರಲ್ಲಿ ಇರಿಸಿದ್ದ. ಇತ್ತೀಚೆಗೆ ಈ ವಿಷಯ ಅವನ ಪತ್ನಿಗೆ ತಿಳಿದು ಗಂಗಾಧರನ ಮದುವೆಯ ಫೋಟೋ ಬಳಸಿ ಆಕೆ ಪೊಲೀಸ್ ದೂರು ದಾಖಲಿಸಿದ್ದಳು. ಪೊಲೀಸ್ ತನಿಖೆ ನಡೆದಾಗ ಈ ಗಂಗಾಧರ ಇದೀಗಾಗಲೇ ಐದು ಮದುವೆಯಾಗಿರುವ ಸಂಗತಿ ಬಯಲಾಗಿದೆ. ವಂಚಿಸಿ ಮದುವೆಯಾಗಿರುವ ಗಂಗಾಧರನ ವಿರುದ್ಧ ಆ ಮಹಿಳೆ ಕೂಡಾ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ.

ಆದರೆ ಪ್ರತಿಯೊಂದು ಘಟನೆಯನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ, ಅದು ಲವ್ ಜಿಹಾದ್ ಎಂದೆಲ್ಲಾ ಕೂಗೆಬ್ಬಿಸಿ  ಎಲ್ಲವನ್ನೂ ತಮ್ಮ ಮತಾಂಧತೆಯ ಕಣ್ಣಿನಿಂದ ತೂಗಿ, ಕೋಮು ಘರ್ಷಣೆ ನಡೆಸಲು ಸದಾ ಕಾದು ಕೂತಿರುವ ಕರಾವಳಿಯ ಕೆಲ ಮತಾಂಧರಿಗೆ ಈ ಘಟನೆಯ ವಾಸ್ತವ ಮಾತ್ರ ಮರ್ಮಾಘಾತ ನೀಡಿದೆ.

Join Whatsapp