ಜಾರಕಿಹೊಳಿ ಸಿಡಿ ಲೇಡಿಯ ಮುಂದುವರಿದ ವೀಡಿಯೋ ಬಿಡುಗಡೆ। ಮೂರನೇ ಬಾರಿ ಮತ್ತೆ ಪ್ರತ್ಯಕ್ಷ !

Prasthutha: March 26, 2021

►ಆಕೆ ರೇಪ್ ಕೇಸ್ ಹಾಕಿದ್ರೂ ಎದುರಿಸುತ್ತೇನೆ ಎಂದ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣ ಪ್ರಕರನ ದಿನಕ್ಕೊಂದು ತಿರುವುದು ಪಡೆಯುತ್ತಿದ್ದು, ಸಂತ್ರಸ್ತೆ ಯುವತಿಯ ‘ವೀಡಿಯೋ ಗೇಮ್’ ಮುಂದುವರಿದಿದೆ. ಆಕೆ ಇಂದು ತನ್ನ ಮೂರನೇ ವೀಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಇಂದು ಮದ್ಯಾಹ್ನ ನಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾಳೆ. ನಾನು ಜೀವಭಯದಿಂದ ಬದುಕುತ್ತಿದ್ದೇನೆ ಎಂದು ಆಕೆ ತನ್ನ ವೀಡಿಯೋದಲ್ಲಿ ತಿಳಿಸಿದ್ದಾಳೆ.

ಇಂದಿನ ವೀಡಿಯೋದಲ್ಲಿ ಆಕೆ ತನ್ನ ವಕೀಲರಾಗಿರುವ ಜಗದೀಶ್ ಗೌಡ ಅವರ ಮೂಲಕ ನಾನು ದೂರು ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾಳೆ. ಆ ಮೂಲಕ ರಮೇಶ್ ಜಾರಕಿಹೊಳಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ದೂರು ನೀಡಿದ ಬಳಿಕ ರಮೇಶ್ ಜಾರಕಿಹೊಳಿ ಬಂಧ ಭೀತಿ ಎದುರಿಸಲಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ

ಸಿಡಿ ಯುವತಿಯ ಮೂರನೇ ವೀಡಿಯೋಗಎ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, “ ಆಕೆ ದೂರು ಕೊಡಲಿ, ನಾನು ಎದುರಿಸಲಿ ಸಿದ್ಧನಿದ್ದೇನೆ. ಆಕೆ ರೇಪ್ ಕೇಸ್ ಕೊಟ್ಟರೂ ನಾನು ಎದುರಿಸುತ್ತೇನೆ. ಕಾನೂನು ಹೋರಾಟದಲ್ಲಿ ನಾನು ಗೆದ್ದು ಬರಲಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!