2 ಗ್ಯಾಂಗ್ ರೇಪ್ | ದಲಿತ ಬಾಲಕಿಯ ಅತ್ಯಾಚಾರ ಮಾಡಿ, ಜೀವಂತ ಹೂಳಲು ಯತ್ನ; ಮತ್ತೊಬ್ಬ ಯುವತಿಯನ್ನು ಚೀಲದಲ್ಲಿ ಹಾಕಿ ರೈಲ್ವೆ ಹಳಿಯಲ್ಲಿ ಎಸೆದರು

Prasthutha|

ಇಂದೋರ್ : ಮಧ್ಯಪ್ರದೇಶದಲ್ಲಿ ಎರಡು ಭೀಕರ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ 14 ವರ್ಷದ ದಲಿತ ಬಾಲಕಿಯನ್ನು ಭೀಕರ ಅತ್ಯಾಚಾರ ಮಾಡಿ, ಕಲ್ಲಿನಿಂದ ಹೊಡೆದು, ಜೀವಂತ ಹೂಳಲು ಯತ್ನಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ, 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚೀಲದಲ್ಲಿ ತುಂಬಿಸಿ, ರೈಲ್ವೆ ಹಳಿಯಲ್ಲಿ ಎಸೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಬೆತುಲ್ ನ ಹಳ್ಳಿಯೊಂದರ ಜಮೀನೊಂದಕ್ಕೆ ಮೋಟಾರು ಬಂದ್ ಮಾಡಲು ಹೋಗಿದ್ದ 14 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಲ್ಲದೆ, ಆಕೆಗೆ ಕಲ್ಲಿನಿಂದ ಹೊಡೆದು, ಕಲ್ಲುಗಳಿಂದ ಮುಚ್ಚಿ, ಜೀವಂತವಾಗಿ ಹೂಳಲು ಯತ್ನಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಆಕೆಯನ್ನು ಹುಡುಕಿಕೊಂಡು ಬಂದಾಗ ಆಕೆ ಕಲ್ಲುಗಳಿಂದ ಮುಚ್ಚಿದ ಗುಂಡಿಯಲ್ಲಿ ನೋವಿನಿಂದ ನರಳುತ್ತಿರುವುದು ಕಂಡು ಬಂದಿತ್ತು. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಇಂದೋರ್ ನಲ್ಲಿ 19ರ ಹರೆಯದ ಯುವತಿಯ ಮಾಜಿ ಪ್ರೇಮಿಯು, ಫ್ಲಾಟ್ ಒಂದಕ್ಕೆ ಕರೆದೊಯ್ದು, ತನ್ನ ಸ್ನೇಹಿತರೊಂದಿಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಚೀಲದಲ್ಲಿ ತುಂಬಿಸಿ ಭಗೀರಥಪುರ ರೈಲ್ವೆ ಹಳಿಯಲ್ಲಿ ಎಸೆದಿದ್ದಾರೆ ಎಂದು ವರದಿಗಳು ತಿಳಿಸಿವೆ.   



Join Whatsapp