ಬೆಳಗಾವಿಗೆ ನುಗ್ಗಲು ಯತ್ನಿಸಿದ ಶಿವಸೈನಿಕರು | ಗಡಿಭಾಗದಲ್ಲಿ ಉದ್ವಿಗ್ನ; ಪೊಲೀಸರೊಂದಿಗೆ ಘರ್ಷಣೆ

Prasthutha|

ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಕನ್ನಡ ಧ್ವಜಸ್ಥಂಭ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಶಿವಸೇನೆ ಕಾರ್ಯಕರ್ತರು ನಗರದೊಳಗೆ ನುಗ್ಗಲು ಯತ್ನಿಸಿದ್ದಾರೆ. ಬೆಳಗಾವಿ ತಾಲೂಕಿನ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಶಿನ್ನೊಳ್ಳಿ ಗ್ರಾಮದ ಮೂಲಕನ ನಗರಕ್ಕೆ ಬರಲು ಪ್ರಯತ್ನಿಸಿದ ಶಿವಸೇನಾ ಕಾರ್ಯಕರ್ತರನ್ನು ರಾಜ್ಯ ಪೊಲೀಸರು ತಡೆದಿದ್ದಾರೆ.

- Advertisement -

ಭಗವಾಧ್ವಜ ಹಿಡಿದ ಶಿವಸೈನಿಕರು ಮತ್ತು ಪೊಲೀಸರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಮಹಾರಾಷ್ಟ್ರ ಪೊಲೀಸರು ಶಿವಸೇನೆ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನಿಂತಿದ್ದುದುದ ಪರೋಕ್ಷವಾಗಿ ಅವರು ಇದನ್ನು ಬೆಂಬಲಿಸಿದಂತಿತ್ತು ಎಂದು ವರದಿಗಳು ತಿಳಿಸಿವೆ.

ಮರಾಠಿ ಭಾಷಿಕರ ಬಾಹುಳ್ಯದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಬದ್ಧನಾಗಿದ್ದೇನೆಂದು ಅಲ್ಲಿನ ಸಿಎಂ ಉದ್ಧವ್ ಠಾಕ್ರೆ ಇತ್ತೀಚೆಗೆ ಹೇಳಿರುವುದು, ಶಿವಸೇನೆಯ ಕಾರ್ಯಕರ್ತರನ್ನು ಪ್ರಚೋದಿಸಿದಂತಾಗಿದೆ ಎನ್ನಲಾಗಿದೆ.

- Advertisement -

ಮಹಾರಾಷ್ಟ್ರ ಗಡಿಗಳಲ್ಲಿ ಪೊಲೀಸ್ ನಿಯೋಜಿಸಲಾಗಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಶಿನೊಳ್ಳಿ ಘಟನೆಯ ಬಗ್ಗೆ ಕನ್ನಡಪರ ಹೋರಾಟಗಾರರು ಬಲವಾಗಿ ಖಂಡಿಸಿದ್ದಾರೆ.

Join Whatsapp