ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅನುಮತಿ ನಿರಾಕರಿಸಿದೆ.

- Advertisement -

ಸುದೀರ್ಘ ಎರಡು ಗಂಟೆಗಳ ವಾದ ವಿವಾದವನ್ನು ಆಲಿಸಿದ ನಂತರ ಎರಡೂ ಬದಿಯ ಪಕ್ಷಕಾರರಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಪೀಠ ಆದೇಶಿಸಿದೆ.

ಸಂಜೆ ವಿಚಾರಣೆ ಬಳಿಕ ಬೆಂಗಳೂರು ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಪೂಜೆ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿತು.

- Advertisement -

ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿದ ಪೀಠ, ಗಣೇಶೋತ್ಸವದ ಪೂಜೆಯನ್ನು ಬೇರೆ ಎಲ್ಲಾದರೂ ಜರುಗಿಸಿ. ಸದ್ಯಕ್ಕೆ ಮುಂದುವರಿಯಬೇಡಿ. ಹೈಕೋರ್ಟ್‌ ಮುಂದೆ ಹೋಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಹೇಳಿದರು.



Join Whatsapp