ಗೋವಿಂದ ಪೈ ಸಂಶೋಧನಾ ಸಂಪುಟದ ಪುನರ್ ಮುದ್ರಣಕ್ಕೆ 30 ಲಕ್ಷ ರೂ.ಅನುದಾನ

Prasthutha|

ಬೆಂಗಳೂರು: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಸಂಪುಟದ ಪುನರ್ ಮುದ್ರಣ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

- Advertisement -

ಗೋವಿಂದ ಪೈ ಸಂಶೋಧನಾ ಸಂಪುಟವನ್ನು 1995ರಲ್ಲಿ ಪ್ರಕಟಿಸಲಾಗಿದ್ದು, 25 ವರ್ಷಗಳು ಸಂದಿವೆ. ಪ್ರಸ್ತುತ ಪ್ರತಿಗಳು ಲಭ್ಯವಿಲ್ಲದಿರುವುದರಿಂದ ಜನರಿಂದ ಬೇಡಿಕೆ ಬರುತ್ತಿದ್ದು, ಸಂಪುಟದ ಪುನರ್ ಮುದ್ರಣಕ್ಕೆ 30 ಲಕ್ಷ ರೂ. ಅನುದಾನ ಅಗತ್ಯವಿದೆ ಎಂದು ಉಡುಪಿಯ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಮನವಿ ಮಾಡಿದ್ದರು.



Join Whatsapp