ವಿರೋಧಗಳ ನಡುವೆಯೂ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

Prasthutha|

ಮಂಗಳೂರು: ವ್ಯಾಪಕ ವಿರೋಧಗಳ ನಡುವೆಯೂ ಕೊನೆಗೂ ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಆಡಿಟೋರಿಯಂನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

- Advertisement -

ವಿಶ್ವವಿದ್ಯಾಲಯದ ಸುತ್ತಮುತ್ತ ಹಾಗೂ ಮಂಗಳಾ ಆಡಿಟೋರಿಯಂ ಒಳಭಾಗದಲ್ಲಿ ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಎಸ್ಆರ್​​ಪಿ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿತ್ತು.

- Advertisement -

ಸಮಾನ ಮನಸ್ಕರ ನಿಯೋಗ, ಕಾಂಗ್ರೆಸ್ ಮುಖಂಡರು, ಎನ್ಎಸ್ ಯುಐ, ಡಿವೈಎಫ್ಐ ಹಾಗೂ ಮಾಜಿ ಸಿಂಡಿಕೇಟ್ ಸದಸ್ಯರು ವಿಶ್ವವಿದ್ಯಾಲಯದ ಉಪಕುಲಪತಿ ಜಯರಾಜ್ ಅಮೀನ್ ಅವರನ್ನು ಭೇಟಿಯಾಗಿ ವಿಶ್ವವಿದ್ಯಾಲಯದಕ್ಕೆ ಅದರದ್ದೇ ಆದ ಗೌರವ ಹಾಗೂ ನಿಯಮ ಇದೆ. ಇಲ್ಲಿ ಧಾರ್ಮಿಕ ಆಚರಣೆ ಸರಿಯಲ್ಲ. ಈ ಹಿಂದೆ ವಿಶ್ವವಿದ್ಯಾಲಯದ ಹಾಸ್ಟೆಲ್​ನಲ್ಲಿ ಗಣೇಶೋತ್ಸವ ಆಚರಣೆ ಆಗುತ್ತಿತ್ತು. ಆದರೆ ಈಗ ಮಂಗಳ ಆಡಿಟೋರಿಯಂನಲ್ಲೇ ಆಗಬೇಕು ಅನ್ನೋದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು.



Join Whatsapp