ಕೃಷ್ಣಾಪುರ: ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ ನಿಧನ

Prasthutha|

ಕೃಷ್ಣಾಪುರ: ಉದ್ಯಮಿ, ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ ‌ನಿಧನರಾಗಿದ್ದಾರೆ.

- Advertisement -

 ಉತ್ತ ಹಾಜಿ ಎಂದೇ ಪ್ರಸಿದ್ಧರಾಗಿರುವ ಬಿ.ಎಂ ಹುಸೈನ್ ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ಹಾಜಿ ಬಿ.ಎಂ ಹುಸೈನ್ ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರಾಗಿ, ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಕಾಟಿಪಳ್ಳ ಚೈತನ್ಯ ಪಬ್ಲಿಕ್ ಸ್ಕೂಲ್ ಇದರ ಗೌರವಾಧ್ಯಕ್ಷರಾಗಿ, ಬದ್ರಿಯಾ ಅಸೋಸಿಯೇಷನ್ ಇದರ ಸ್ಥಾಪಕ ಅಧ್ಯಕ್ಷರಾಗಿ, ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.  

- Advertisement -

ಬಿ.ಎಂ ಹುಸೈನ್ ಹಾಜಿ ಅವರ ಪಾರ್ಥಿವ ಶರೀರವನ್ನು ಕೃಷ್ಣಾಪುರ ಲಂಡನ್ ಪಾರ್ಕ್ ಬಳಿ ಇರುವ ಸ್ವಗೃಹದಲ್ಲಿ ಸಂದರ್ಶನಕ್ಕೆ ಇರಿಸಲಾಗಿದ್ದು, ಇಂದು ಸಂಜೆ ಕೃಷ್ಣಾಪುರದ ಈದ್ಗಾ ಮೈದಾನದಲ್ಲಿ ದಫನ ಕಾರ್ಯ ನೆರವೇರಲಿದೆ.