ಗಾಂಧಿ ಶಾಂತಿ ಪ್ರಶಸ್ತಿಗೆ ಬಾಂಗ್ಲಾದೇಶದ ರಾಷ್ಟ್ರಪಿತ ಮತ್ತು ಒಮಾನ್ ಆಡಳಿತಗಾರ ಆಯ್ಕೆ

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರ 2019 ಮತ್ತು 2020 ರ ಗಾಂಧಿ ಶಾಂತಿ ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಬಾಂಗ್ಲಾದೇಶದ ರಾಷ್ಟ್ರಪಿತ ಶೈಖ್ ಮುಜಿಬುರ್ ರಹಮಾನ್ ಅವರು 2020 ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019 ರ ಪ್ರಶಸ್ತಿ ಒಮಾನ್‌ನ ಆಡಳಿತಗಾರ ದಿವಂಗತ ಸುಲ್ತಾನ್ ಕಬೂಸ್ ಬಿನ್ ಸಯೀದ್ ಅಲ್ ಸಯೀದ್ ಅವರಿಗೆ ಸಲ್ಲುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತೀರ್ಪುಗಾರರು ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಪ್ರಶಸ್ತಿಯು 1 ಕೋಟಿ ರೂ. ನಗದು ಬಹುಮಾನ ಮತ್ತು ಫಲಕವನ್ನು ಹೊಂದಿದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ವಕ್ತಾರರಾಗಿದ್ದ ಶೇಖ್ ಮುಜಿಬುರ್ ರಹಮಾನ್ ಮತ್ತು ಸುಲ್ತಾನ್ ಕಬೂಸ್ ಬಿನ್ ಸಯೀದ್ ಅಲ್ ಸಯೀದ್ ಅವರು ಶಾಂತಿಯ ಸಂದೇಶವಾಹಕರಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

- Advertisement -