ಪಾರ್ಶ್ವವಾಯು ಪೀಡಿತ ರೋಗಿಯನ್ನು ಊರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್

Prasthutha|

ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದ ತುರೈಫ್ ನ ಕುರಾಯ ಎಂಬಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಸಿದ್ದಕಟ್ಟೆಯ ನಿವಾಸಿಯಾದ ಯಾಕೂಬ್ ಬ್ಯಾರಿ ಎಂಬವರು, ಕೋವಿಡ್-19, ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದು, ಅವರನ್ನು ಇಂಡಿಯನ್ ಸೋಶಿಯಲ್ ಫಾರಂ ನೆರವಿನಲ್ಲಿ  ಊರಿಗೆ ಕಳುಹಿಸಲಾಗಿದೆ.

- Advertisement -

ಯಾಕೂಬ್ ಬ್ಯಾರಿ ಕೋವಿಡ್-19, ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ರೋಗಿಯ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫಾರಂ ಅನ್ನು ಸಂಪರ್ಕಿಸಿ ರೋಗಿಯ ಬಗ್ಗೆ ಮಾಹಿತಿ ನೀಡಿ, ಊರಿಗೆ ಕಳುಹಿಸಿಕೊಡಲು ಬಗ್ಗೆ ಮನವಿಯನ್ನು ಮಾಡಿದಾಗ ರೋಗಿಯ ಪರಿಸ್ಥಿತಿಯನ್ನು ನೋಡಿದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್ ಘಟಕವು ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಶಬೀರ್ ಕೃಷ್ಣಾಪುರ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ರೋಗಿಯನ್ನು 1800 ಕಿ. ಮೀ ದೂರದಿಂದ ದಮ್ಮಾಮ್ ವಿಮಾನ ನಿಲ್ದಾಣಕ್ಕೆ ಕರೆತರಲು ಆಂಬುಲೆನ್ಸ್ ಗಾಗಿ ಜುಬೈಲ್ ನ ಎಕ್ಸ್ ಪರ್ಟೈಸ್ ಸಂಸ್ಥೆಯನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೆ ಹಾಗೂ ಸಮಾಜಸೇವಕರಾದ ಫಾರೂಕ್ ಪೋರ್ಟ್‌ಫೋಲಿಯೋ ಇವರ ಸಹಾಯದೊಂದಿಗೆ ರೋಗಿಯನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಊರಿಗೆ ಕಳುಹಿಸಿದೆ.

    ಇದೇ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನಾದ ಅಲಿ ರಝಾ ಇವರನ್ನು ಇಂಡಿಯನ್ ಸೋಶಿಯಲ್ ಫಾರಂ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಐ. ಎಸ್. ಎಫ್. ಜುಬೈಲ್ ಸಮಾಜ ಸೇವಾ ಘಟಕದ ಉಸ್ತುವಾರಿ ಆಗಿರುವ ಝುಲ್ಕರ್ ಸುರತ್ಕಲ್, ರಾಜ್ಯ ಅಧ್ಯಕ್ಷರಾದ ನಝೀರ್ ತುಂಬೆ, ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಶಬೀರ್ ಕೃಷ್ಣಾಪುರ, ಎಕ್ಸ್ ಪರ್ಟೈಸ್ ಸಂಸ್ಥೆಯ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Join Whatsapp