ಕಾಂಗ್ರೆಸ್‌ ಒಟ್ಟಾಗಿರಲು ಗಾಂಧಿ ಕುಟುಂಬ ಅನಿವಾರ್ಯ : ಡಿ.ಕೆ ಶಿವಕುಮಾರ್‌

Prasthutha|

ಹೊಸದಿಲ್ಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಡಿಕೆಶಿ ತಿರುಗೇಟು ನೀಡಿದ್ದು ‘ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್‌ ಒಟ್ಟಾಗಿರಲು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುರುವಾರ ಹೇಳಿದ್ದಾರೆ.

- Advertisement -

‘ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಉಳಿಯುವುದು ಅಸಾಧ್ಯ. ಅಧಿಕಾರದ ದಾಹ ಇರುವವರು ಪಕ್ಷ ತೊರೆಯಬಹುದು. ಇನ್ನುಳಿದಿರುವ ನಮಗೆ ಅಧಿಕಾರದ ಹಪಾಹಪಿ ಇಲ್ಲ. ನಾವು ಗಾಂಧಿ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಹೊರಹೋಗುವವರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಮಾತನಾಡಿರು ಅವರು, ‘ವೈಯಕ್ತಿಕ ಲಾಭ ನೋಡುವವರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ನಿಷ್ಠರಾಗಿದ್ದೇವೆ. ಗಾಂಧಿ ಕುಟುಂಬದೊಂದಿಗೆ ಯಾವಾಗಲೂ ನಿಲ್ಲುತ್ತೇವೆ’ ಎಂದು ಅವರು ತಿಳಿಸಿದರು.



Join Whatsapp