ಇಂಡಿಯನ್ ಸೂಪರ್ ಲೀಗ್ ಸೆಮಿಫೈನಲ್: ಸಹಲ್ ಸಮದ್ ಗೋಲಿನ ನೆರವಿನಿಂದ ಗೆದ್ದು ಬೀಗಿದ ಕೇರಳ ಬ್ಲಾಸ್ಟರ್ಸ್

Prasthutha|

ಗೋವಾ: ಸಹಲ್ ಅಬ್ದುಲ್ ಸಮದ್ ಗಳಿಸಿದ ಆಕರ್ಷಕ ಗೋಲಿನ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್’ನ ಮೊದಲ ಚರಣದಲ್ಲಿ ಜಮ್ಶೆಡ್’ಪುರ್ ಫುಟ್ಬಾಲ್ ಕ್ಲಬ್ ತಂಡದ ಎದುರು ರೋಚಕ ಗೆಲುವು ಸಾಧಿಸಿದೆ.
ಗೋವಾದ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ‌ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

- Advertisement -


ಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಮೇಲುಗೈ ಸಾಧಿಸಿದೆ. ಪಂದ್ಯದ 38ನೇ ನಿಮಿಷದಲ್ಲಿ ಕೆಬಿಎಫ್‌ಸಿ ತಮಡದ ಪರವಾಗಿ ಏಕೈಕ ಗೋಲು ದಾಖಲಾಗಿತ್ತು.
ಡಿ ಬಾಕ್ಸ್’ನ ಹೊರಭಾಗದಿಂದಲೇ ಚೆಂಡನ್ನು ಚಾಣಾಕ್ಷತನದಿಂದ ಗೋಲು ಬಲೆಯೊಳಗೆ ಸೇರಿಸುವಲ್ಲಿ ಸ್ಟಾರ್ ಸ್ಟ್ರೈಕರ್
ಸಹಲ್ ಅಬ್ದುಲ್ ಸಮದ್ ಯಶಸ್ವಿಯಾದರು. ಬಳಿಕ ಸಮಬಲ ಸಾಧಿಸಲು ಜಮ್ಶೆಡ್’ಪುರ ತಂಡದ ಆಟಗಾರರು ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ.
ಮೊದಲ‌ ಸೆಮಿಫೈನಲ್’ನ‌ ದ್ವಿತೀಯ ಚರಣದ ಪಂದ್ಯ ಫೆಬ್ರವರಿ 15ರಂದು ಗೋವಾದ ತಿಲಕ್ ಮೈದಾನದಲ್ಲಿ ನಡೆಯಲಿದೆ.

Join Whatsapp